ಕರಣ್ ಪಾರ್ಟಿಯಲ್ಲಿ ಬಿ ಟೌನ್ ಸೆಲೆಬ್ರೆಟಿಗಳು ಫುಲ್ ಟೈಟ್!

Picture of Cinibuzz

Cinibuzz

Bureau Report

ಬಾಲಿವುಡ್ ಫೇಮಸ್ ನಿರ್ಮಾಪಕ ಕಮ್ ನಿರ್ದೇಶಕ ಕರಣ್ ಜೋಹರ್ ಬಿ ಟೌನಿನ ಮಂದಿಗಾಗಿ ಪಾರ್ಟಿಗಳನ್ನು ಆಯೋಜಿಸುವುದರಲ್ಲಿ ಎತ್ತಿದ ಕೈ. ಸಿನಿಮಾ ಹಿಟ್ ಆಗಲಿ, ಫ್ಲಾಪ್ ಆಗಲಿ ಅವರು ಪಾರ್ಟಿ ಆಯೋಜನೆ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಅಂತಹುದೇ ಪಾರ್ಟಿಯನ್ನು ಏರ್ಪಡಿಸಿರುವ ವಿಡಿಯೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಆ ವಿಡಿಯೋದಲ್ಲಿ ಮಾದಕ ದ್ರವ್ಯ ಸೇವಿಸಿ ಬಾಲಿವುಡ್ ಕಲಾವಿದರ ಹುಚ್ಚಾಟಗಳು ನೋಡಿದವರಿಗೂ ಮತ್ತೇರುವಂತೆ ಮಾಡಿದೆ.

View this post on Instagram

Saturday night vibes

A post shared by Karan Johar (@karanjohar) on

ಯೆಸ್.. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​, ವರುಣ್​ ಧವನ್​, ಶಾಹಿದ್​ ಕಪೂರ್​, ಅರ್ಜುನ್​ ಕಪೂರ್​, ಮಲ್ಲಿಕಾ ಅರೋರಾ, ವಿಕ್ಕಿ ಕೌಶಲ್​ ಸೇರಿ ಅನೇಕರಿದ್ದಾರೆ. ಅಲ್ಲಿದ್ದ ಬಹುತೇಕರು ಯಾವುದೋ ಅಮಲಿನಲ್ಲಿದ್ದರು ಎಂಬುದು ಈ ವಿಡಿಯೋ ನೋಡಿದಾಕ್ಷಣ ಗೊತ್ತಾಗಿ ಬಿಡುತ್ತದೆ. ವಿಡಿಯೋ ಚಿತ್ರೀಕರಿಸುವ ವೇಳೆ ದೀಪಿಕಾ ಸೇರಿದಂತೆ ಅನೇಕರು ಕುಣಿದ ಕುಪ್ಪಳಿಸಿ ಗಲಾಟೆ ಮಾಡಿದ್ದಾರೆ. ಕೋತಿಗೆ ಹೆಂಡ ಕುಡಿಸಿದರೆ ಇನ್ನೇನಾಗುತ್ತೇ….

ಇನ್ನಷ್ಟು ಓದಿರಿ

Scroll to Top