ಸಿಂಗಾಪುರದಲ್ಲಿ ದೇವಕಿ ಪ್ರೀಮಿಯರ್ ಶೋ!

Picture of Cinibuzz

Cinibuzz

Bureau Report

ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸೌಂಡು ಮಾಡಿದ್ದ ಪ್ರಿಯಾಂಕ ಉಪೇಂದ್ರ ಹಾಗೂ ಪುತ್ರಿ ಐಶ್ವರ್ಯಾ ಉಪೇಂದ್ರ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ದೇವಕಿ. ಈಗಾಗಲೇ ಬಿಡುಗಡೆ ಭಾಗ್ಯ ಕಂಡು ಥಿಯೇಟರ್ ಸಮಸ್ಯೆಯಿಂದ ಬಳಲುತ್ತಿದ್ದರೂ ಯಶಸ್ವಿಯಾಗಿಯೇ ಪ್ರದರ್ಶನವಾಗುತ್ತಿದೆ. ಅಮ್ಮ ಮಗಳ ಬಾಂಧವ್ಯದ ಜತೆಗೆ ಮಕ್ಕಳ ಶೋಷಣೆ, ಕಳ್ಳಸಾಗಣಿಕೆಯಂತಹ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದ ದೇವಕಿ ಸಿಂಗಾಪುರದಲ್ಲಿ ಪ್ರೀಮಿಯರ್ ಶೋ ತಯಾರಿಯಲ್ಲಿದ್ದೆ.

ಯೆಸ್.. ಮಮ್ಮಿ ಸೇವ್ ಮಿ ನಂತರ ಲೋಹಿತ್ ಮತ್ತು ಪ್ರಿಯಾಂಕ ನಟನೆಯ ದೇವಕಿ ಸಿನಿಮಾ ಕಥೆ ಹಾಗೂ ಮೇಕಿಂಗ್ ನಿಂದಾಗಿಯೇ ಪ್ರೇಕ್ಷಕರ ಮನಗೆದ್ದಿದೆ. ಇದೀಗ ಇದೇ ಭಾನುವಾರ ಆಗಸ್ಟ್ 4ರಂದು ಸಿಂಗಾಪುರ್ ನಲ್ಲಿ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಈ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿರುವ ಉಪೇಂದ್ರ, ನನ್ನ ಮಗಳು ಐಶ್ವರ್ಯ ಹಾಗೂ ಪತ್ನಿ ಪ್ರಿಯಾಂಕ ಜೊತೆಯಾಗಿ ನಟಿಸಿರೋ ದೇವಕಿ ಸಿನಿಮಾ ಇದೇ ಮೊದಲ ಬಾರಿಗೆ ಗೋಲ್ಡನ್ ಸಿನಿಮಾಸ್ ಅಡಿಯಲ್ಲಿ ಇಂಟರ್ ನ್ಯಾಷನಲ್ ಪ್ರೀಮಿಯರ್ ಶೋ ಅನ್ನು ಸಿಂಗಪುರ್​​ನಲ್ಲಿ ಏರ್ಪಡಿಸಿದೆ. ಆಗಸ್ಟ್​ 4 ರಂದು ಭಾನುವಾರ ರಿಲೀಸ್ ಆಗುತ್ತಿದೆ. ಫ್ಯಾಮಿಲಿ ಜೊತೆಯಾಗಿ ಕುಳಿತು ನೋಡೋ ಒಂದೊಳ್ಳೆ ಸಿನಿಮಾ. ಅಂದು ನಾನು ಮತ್ತು ಪ್ರಿಯಾಂಕ ಕೂಡ ನಿಮ್ಮ ಜೊತೆಯಾಗಿ ಸಿನಿಮಾ ವೀಕ್ಷಣೆ ಮಾಡಲಿದ್ದೇವೆ. ನೀವು ಕೂಡ ಬನ್ನಿ ಎಂದು ಕನ್ನಡಾಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top