ಭರಾಟೆ ಸಾಂಗ್ ಸ್ವಿಡ್ಜರ್ ಲ್ಯಾಂಡ್ ನಲ್ಲಿ ಬಿಡುಗಡೆ!

Picture of Cinibuzz

Cinibuzz

Bureau Report

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ಜತೆಯಾಗಿ ನಟಿಸಿರುವ ಮಾಸ್ ಪ್ರೇಕ್ಷಕರ ಸಿನಿಮಾ ಭರಾಟೆ. ಈಗಾಗಲೇ ಅದ್ದೂರಿ ಮೇಕಿಂಗ್ ಹಾಗೂ ತಾರಾಗಣದಿಂದಾಗಿ ಸಿಕ್ಕಾಪಟ್ಟೆ ಕ್ರೇಜ್ ಮಾಡಿರುವ ಭರಾಟೆ ಆಗಸ್ಟ್ 9ಕ್ಕೆ ತನ್ನ ಮೊದಲ ಸಾಂಗ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡಿತ್ತು. ಅದು ಕನ್ ಫರ್ಮ್ ಆಗಿದ್ದು, ವಿಶೇಷವೆಂದರೆ ಹಾಡಿನ ಶೂಟಿಂಗ್ ಗಾಗಿ ಸ್ವಿಡ್ಜರ್ ಲೆಂಡ್ ಗೆ ತೆರಳಲಿರುವ ಭರಾಟೆ ಚಿತ್ರತಂಡ ಅಲ್ಲಿಯೇ ತಮ್ಮ ಮೊದಲ ಸಾಂಗ್ ಬಿಡುಗಡೆ ಮಾಡಲಿದೆ.

ಕಾಮನ್ನಾಗಿ ಕನ್ನಡ ಸಿನಿಮಾಗಳನ್ನು ವಿದೇಶಿ ನೆಲದಲ್ಲಿ ಬಿಡುಗಡೆ ಮಾಡೋದು ಅಪರೂಪ. ಆದರೆ ಭರಾಟೆ ಟೀಮ್ ಸ್ವಿಡ್ಜರ್ ಲೆಂಡ್ ನಲ್ಲಿ ಸಾಂಗ್ ಬಿಡುಗಡೆ ಮಾಡುವ ಮೂಲಕ ಹೊಸತನವನ್ನು ಮೆರೆಯಲಿದೆ. ಇದೇ ಮೊದಲ ಬಾರಿಗೆ ಸಾಯಿಕುಮಾರ್ ತ್ರಿವಳಿ ಸಹೋದರರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಸೆಪ್ಟೆಂಬರ್ 27ಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಬಹದ್ದೂರ್ ಚೇತನ್ ನಿರ್ದೆಶಿಸುತ್ತಿರುವ ಮೂರನೇ ಸಿನಿಮಾವಾಗಿದ್ದು, ಭರಾಟೆಯ ಮೂಲಕ ಚೇತನ್ ಹೇಗೆ ಹ್ಯಾಟ್ರಿಕ್ ಬಾರಿಸಲಿದ್ದಾರೆ ನೋಡಬೇಕು.

ಇನ್ನಷ್ಟು ಓದಿರಿ

Scroll to Top