ಶೀಘ್ರದಲ್ಲಿ ಸೆಟ್ಟೇರಲಿದೆ ಕ್ರಿಷ್ 4!

Picture of Cinibuzz

Cinibuzz

Bureau Report

ಹೃತಿಕ್ ರೋಷನ್ ನಟನೆಯ ಸೂಪರ್ ಹಿಟ್ ಕ್ರಿಷ್ ಸಿನಿಮಾದ 4ನೇ ಸರಣಿ ಕೂಡ ಶೀಘ್ರದಲ್ಲಿ ಸೆಟ್ಟೇರಲಿದೆ. ಈ ವಿಚಾರದ ಕುರಿತು ಸ್ವತಃ ಹೃತಿಕ್ ರೋಷನ್ ಅವರೇ ತಿಳಿಸಿದ್ದು, ಕ್ರಿಷ್ 4 ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಅದೂ ಇನ್ನೇನು ಮುಗಿಯಲಿದೆ. ಇದು ಪೂರ್ಣಗೊಂಡ ಬಳಿಕ ಸಿನಿಮಾ ನಿರ್ಮಾಣದ ಕುರಿತಂತೆ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕ್ರಿಷ್‌ 4 ಸಿನಿಮಾ ಮುಂದಿನ ವರ್ಷದ ಕ್ರಿಸ್‌ಮಸ್‌ಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದಕ್ಕಿಂತ ಮೊದಲು ನಾನು ಬೇರೆ ಸಿನಿಮಾ ಮಾಡುವುದಾದರೆ ಕ್ರಿಷ್‌ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಲಿದೆ ಎಂದು ಅವರು ವಿವರಿಸಿದ್ದಾರೆ.

ಎಲ್ಲ ವಯೋಮಾನದವರಿಗೂ ಫೇವರೆಟ್ ಆಗಿರುವ ಕ್ರಿಷ್ ಸಿನಿಮಾಕ್ಕಾಗಿ ಈಗಾಗಲೇ ಸಾಕಷ್ಟು ಬೇಡಿಕೆಯೂ ಹರಿದುಬಂದಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆ ಯೋಚನೆಗೆ ಬಲವಿರಲಿಲ್ಲ. ಸದ್ಯ ನೋಡುಗರ ಆಸೆ ಸದ್ಯದಲ್ಲೇ ಈಡೇರಲಿರುವುದು ಅಭಿಮಾನಿಗಳಿಗೆ ಖುಷಿಯನ್ನು ತಂದಿದೆ.  ಇನ್ನು ಕ್ರಿಷ್‌ 3 ಸಿನಿಮಾದಲ್ಲಿ ಹೃತಿಕ್‌ ಗೆ ಜೋಡಿಯಾಗಿ ಕಂಗನಾ ರನಾವತ್‌ ನಟಿಸಿದ್ದರು. ಆದರೆ ಈಗ ಅವರಿಬ್ಬರ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ಕ್ರಿಷ್‌ 4ರಲ್ಲಿ ನಾಯಕಿ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ. ಸದ್ಯ ಸೂಪರ್ 30 ಚಿತ್ರದ ಸಕ್ಸಸ್ ನಲ್ಲಿರುವ ಹೃತಿಕ‍್ ರೋಷನ್ ಅಕ್ಟೋಬರ್ ಗೆ ಬಿಡುಗಡೆಯಾಗಲಿರುವ ವಾರ್ ಚಿತ್ರದ ಪ್ರೊಮೋಷನ್ ನಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top