ರಾಂಧವ ಚಿತ್ರದ ರಿಮೇಕ್‌ ಹಾಗೂ ಡಬ್ಬಿಂಗ್ ರೈಟ್ಸ್ ಗೆ ಎಲ್ಲಿಲ್ಲದ ಬೇಡಿಕೆ!

Picture of Cinibuzz

Cinibuzz

Bureau Report

ಯಾವುದಾದರೂ ನಟ ನಟಿಯರ ಚೊಚ್ಚಲ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಹೈಪ್ ಇರುತ್ತದೆ. ಅದರಲ್ಲೂ ಕಿರುತೆರೆಯಲ್ಲಿ ಫೇಮಸ್ ಆಗಿ ಹಿರಿತೆರೆಗೆ ಬಂದರಂತೂ ಕೇಳ್ಬೇಕೆ. ನಿರೀಕ್ಷೆ ಮತ್ತಷ್ಟು ಹೆಚ್ಚಾಗಿಯೇ ಇರುತ್ತದೆ. ಸದ್ಯ ಸ್ವಾತಂತ್ರ್ಯೋತ್ಸವಕ್ಕೆ ಬಿಡುಗಡೆಗೆ ರೆಡಿಯಾಗಿರುವ ರಾಂಧವ ಚಿತ್ರವೂ ಅದೇ ಹಾದಿಯಲ್ಲಿದೆ.


ಬಿಗ್ ಬಾಸ್ ಖ್ಯಾತಿಯ ಲವರ್ ಬಾಯ್ ಭುವನ್ ಪೊನ್ನಣ್ಣ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ರಾಂಧವ ಚಿತ್ರವನ್ನು ಸುನೀಲ್ ಆಚಾರ್ಯ ನಿರ್ದೇಶನ ಮಾಡಿದ್ದಾರೆ‌. ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಸನತ್ ಕುಮಾರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಟೀಸರ್, ಟ್ರೇಲರ್, ವಿಡಿಯೋ ಸಾಂಗುಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ರಾಂಧವ ಡಬ್ಬಿಂಗ್, ರಿಮೇಕ್ ವಿಚಾರದಲ್ಲಿಯೂ ಹಿಂದೆ ಬಿದ್ದಿಲ್ಲ. ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿರುವ ರಾಂಧವ ಚಿತ್ರವನ್ನು ಕಾಲಿವುಡ್ ಹಾಗೂ ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಯಾಗಿದ್ದು ರೈಟ್ಸ್ ಗಾಗಿ ನಿರ್ಮಾಪಕರ ಬೆನ್ನುಬಿದ್ದಿದ್ದಾರೆ. ಆದರೆ ಅವರ ಫೋನ್ ಕಾಲ್ ಗೆ ಸಿಗದ ನಿರ್ಮಾಪಕ ಸನತ್ ಕುಮಾರ್ ಯಾರಿಗೆ ಹಕ್ಕುಗಳನ್ನು ನೀಡುತ್ತಾರೆ ಎಂಬ ವಿಚಾರವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ.

ಇನ್ನಷ್ಟು ಓದಿರಿ

Scroll to Top