ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಡುಗರು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನಟಿ ದಿಶಾ ಪೂವಯ್ಯ. ಆ ಚಿತ್ರದ ಯಶಸ್ಸಿನ ನಂತರ ಮಳ್ಳಿ, ಸಿಂಹಾದ್ರಿ, ಆಶೀರ್ವಾದ, ಅಗಮ್ಯ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸದ್ಯ ಸಾಲಿಗ್ರಾಮ ಮತ್ತು ಟರ್ನಿಂಗ್ ಪಾಯಿಂಟ್ ಚಿತ್ರಗಳು ಬಿಡುಗಡೆ ಹಂತದಲ್ಲಿದ್ದು, ಗದಾಯುದ್ಧ ಚಿತ್ರ ಚಿತ್ರೀಕರಣದ ಹಂತದಲ್ಲಿದೆ. ಈ ಚಿತ್ರವನ್ನು ಶ್ರೀವತ್ಸ್ ನಿರ್ದೇಶನ ಮಾಡುತ್ತಿದ್ದಾರೆ.

ಗದಾಯುದ್ಧದಲ್ಲಿ ಬಬ್ಲಿ ಬಬ್ಲಿಯಾಗಿ ಎರಡು ಶೇಡಿನ ಪಾತ್ರಗಳಲ್ಲಿ ದಿಶಾ ಪೂವಯ್ಯ ಕಾಣಿಸಿಕೊಂಡಿದ್ದಾರಂತೆ. ಇದು ಬ್ರಹ್ಮಚಾರಿ ಹುಡುಗನ ಪಾತ್ರದ ಸುತ್ತುವ ಚಿತ್ರವಾಗಿದ್ದು, ಅವನ ಬಿದ್ದು ಪಟಾಯಿಸಬೇಕಾದ ಪಾತ್ರ ನನ್ನದು ಎನ್ನುತ್ತಾರೆ ದಿಶಾ ಪೂವಯ್ಯ. ಇನ್ನು ಚಿತ್ರದ ಮೊದಲಾರ್ಧದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದು, ದ್ವಿತೀಯಾರ್ಧದಲ್ಲಿ ಸಂಪ್ರದಾಯ ಮನೆತನದ ಹುಡುಗಿಯಾಗಿಯೂ ದಿಶಾ ಪೂವಯ್ಯ ನಟಿಸಿದ್ದಾರೆ.











































