ಧನ್ಯಾ ರಾಮ್ ಕುಮಾರ್ ನಿನ್ನ ಸನಿಹಕೆ ಫಸ್ಟ್ ಲುಕ್ ಬಿಡುಗಡೆ!

Picture of Cinibuzz

Cinibuzz

Bureau Report

ಡಾ. ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟಿಸುತ್ತಿರುವ ಚೊಚ್ಚಲ ಸಿನಿಮಾ ನಿನ್ನ ಸನಿಹಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದ ಮೊದಲ ಪೋಸ್ಟರ್ ಅನ್ನು ಧನ್ಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿನ್ನ ಸನಿಹಕೆ ಚಿತ್ರದಲ್ಲಿ ಧನ್ಯಾಗೆ ಜೋಡಿಯಾಗಿ ಸೂರಜ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸೂರಜ್ ಕವಿರಾಜ್ ನಿರ್ದೇಶನದ ಮದುವೆಯ ಮಮತೆಯ ಕರೆಯೋಲೆ, ಸಿಲಿಕಾನ್ ಸಿಟಿ, ಡಾಟರ್ ಆಫ್ ಪಾರ್ವತಮ್ಮ ಚಿತ್ರಗಳಲ್ಲಿ ನಟಿಸಿದ ಅನುಭವಹೊಂದಿದ್ದಾರೆ.  ನಿನ್ನ ಸನಿಹಕೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಎಂಬುದು ಫಸ್ಟ್ ಲುಕ್ ನೋಡಿದ ಮಂದಿ ಗೆಸ್ ಮಾಡದೇ ಇರಲಾರರು. ಪೋಸ್ಟರ್ ನಲ್ಲಿ ಧನ್ಯಾ ಮತ್ತು ಸೂರಜ್ ಜೋಡಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.
ಈ ಸಿನಿಮಾವನ್ನು ಸುಮನ್ ಜಾದೂಗಾರ್ ನಿರ್ದೇಶನ ಮಾಡುತ್ತಿದ್ದು, ವೈಟ್ ಅಂಡ್ ಗ್ರೇ ಮೀಡಿಯಾ ಸಂಸ್ಥೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top