ಅಭಿಮಾನಿಗಳಿಗೆ ಕನ್ನಡದಲ್ಲಿ ಪತ್ರ ಬರೆದ ಹರಿಪ್ರಿಯಾ!

Picture of Cinibuzz

Cinibuzz

Bureau Report

ಕೆಲವು ದಿನಗಳ ಹಿಂದಷ್ಟೇ ಕನ್ನಡತಿ ಅನುಷ್ಕಾ ಶೆಟ್ಟಿ ತನ್ನ ತಾಯಿಗೆ ಕನ್ನಡದಲ್ಲಿ ವಿಶ್ ಮಾಡಿದ್ದು ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದಲ್ಲಿಯೇ ಬರೆಯಿರಿ ಎಂದು ಒತ್ತಾಯ ಹೇರುವ ಅಭಿಮಾನಿಗಳಿಗೆ ನಟಿ ಹರಿಪ್ರಿಯಾ ಕನ್ನಡದಲ್ಲಿಯೇ ಪತ್ರ ಬರೆಯುವ ಮೂಲಕ ಉತ್ತರ ನೀಡಿದ್ದಾರೆ.

ಸ್ವತಃ ತಮ್ಮ ಕೈ ಬರಹದಲ್ಲಿಯೇ ಉತ್ತರಿಸಿರುವ ಹರಿಪ್ರಿಯಾ  ‘ನನಗೆ ಕನ್ನಡ ಮಾತನಾಡಲು, ಓದಲು, ಬರೆಯಲು ಚೆನ್ನಾಗಿ ಬರುತ್ತದೆ. ಕನ್ನಡ ಭಾಷೆಯ ಮೇಲೆ ಅಪಾರ ಪ್ರೇಮ ನನಗಿದೆ. ಕೆಲ ಅಭಿಮಾನಿಗಳು ನಾನು ಮಾಡುವ ಪೋಸ್ಟ್​ಗಳಿಗೆ ಕಮೆಂಟ್ ಮಾಡುವಾಗ ಕನ್ನಡದಲ್ಲಿಯೇ ಬರೆಯಿರಿ ಎಂದು ಹೇಳುತ್ತಾರೆ. ನನ್ನ ಇನ್​ಬಾಕ್ಸ್​ಗೆ ಕೂಡ ಕೆಲವು ಸಂದೇಶಗಳು ಬರುತ್ತವೆ. ಆದರೆ ನಾನು ಇಂಗ್ಲಿಷ್​ನಲ್ಲಿ ಯಾಕೆ ಪೋಸ್ಟ್ ಮಾಡುತ್ತೇನೆಂದರೆ, ನನಗೆ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಅಭಿಮಾನಿಗಳು ಕೂಡ ಇದ್ದಾರೆ. ಪೋಸ್ಟ್ ಮಾಡುವ ಮೂಲ ಉದ್ದೇಶ ನಾನು ಹೇಳಲು ಹೊರಟಿರುವ ವಿಷಯ ಎಲ್ಲರಿಗೂ ಅರ್ಥವಾಗಲಿ ಎಂಬುದು. ಫೋನ್​ನಲ್ಲಿ ಕನ್ನಡ ಟೈಪ್ ಮಾಡುವಾಗ ಕಾಗುಣಿತ ತಪ್ಪಾಗಿರುವುದು ಇತರರ ಪೋಸ್ಟ್​ಗಳಲ್ಲಿ ಗಮನಿಸಿದ್ದೇನೆ. ಇಂಥ ಕೆಲವು ಪ್ರಾಕ್ಟಿಕಲ್ ಕಾರಣಗಳಿಂದಾಗಿ ಕನ್ನಡದಲ್ಲಿ ಪೋಸ್ಟ್ ಮಾಡಲು ಆಗುತ್ತಿಲ್ಲ’ ಎಂದು ಹರಿಪ್ರಿಯಾ ಸಮರ್ಥನೆ ನೀಡಿದ್ದಾರೆ. ಕನ್ನಡ ಭಾಷಾ ಪ್ರೇಮ ಹೃದಯದಲ್ಲಿರಲಿ.. ಜತೆಗೆ ನಟಿಸುವ ಕನ್ನಡ ಚಿತ್ರಗಳಲ್ಲಿ ಕನ್ನಡತನವನ್ನು ಎತ್ತಿ ತೋರಿಸಲಿ. ಮಂದ ಬುದ್ಧಿಯ ತೋರುವ ರಶ್ಮಿಕಾ ಅವರಂತೆ ತೀರ ಕೆಳಮಟ್ಟಕ್ಕೆ ವರ್ತಿಸದೇ ಜಾಗರೂಕತೆಯಾಗಿದ್ದರೆ ಆಂಗ್ಲ ಭಾಷೆಯಲ್ಲಿಯೇ ಟೈಪಿಸಿದರೆ ತಪ್ಪೇನು?

 

ಇನ್ನಷ್ಟು ಓದಿರಿ

Scroll to Top