ರಾಕಿ ಸಾವಂತ್ ಮದುವೆ ಸುದ್ದಿ ನಿಜವಾಯ್ತು!

Picture of Cinibuzz

Cinibuzz

Bureau Report

ಇತ್ತೀಚಿಗಷ್ಟೇ ರಾಕಿ ಸಾವಂತ್ ಬ್ರೈಡ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಾಕಿ ಸಾವಂತ್ ಕದ್ದು ಮದುವೆಯಾಗಿದ್ದಾರೆ ಎಂಬ ಸುದ್ದಿ ಪುಂಖಾನುಪುಂಖವಾಗಿ ಹರಡಿಕೊಂಡಿತ್ತು. ಆದರೆ ಅವೆಲ್ಲವನ್ನೂ ಶುದ್ಧ ಸುಳ್ಳು ಎಂದು ಹೇಳಿದ್ದ ರಾಕಿ ಸಾವಂತ್ ಬರೀ ಫೋಟೋ ಶೂಟ್ ಮಾಡಿಸಿಕೊಂಡಿದ್ದೆ ಎಂದೂ ಹೇಳಿದ್ದರು.

ಅಷ್ಟಾದರೂ ರಾಕಿ ಸಾವಂತ್ ಬಿಟ್ಟೂ ಬಿಡದೇ ಡಿಫರೆಂಟ್ ಡಿಫರೆಂಟ್ ಮಧುವಣಗಿತ್ತಿಯ ಫೋಟೋಗಳನ್ನು ಹಂಚಿಕೊಳ್ಳೋದಕ್ಕೆ ಶುರು ಮಾಡಿದ್ದರು. ಹಣೆಯಲ್ಲಿ ಕುಂಕುಮ, ಕೊರಳಲ್ಲಿ ಮಾಂಗಲ್ಯ ಸರ ಇರುವ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಇದನ್ನು ನೋಡಿದ ನೆಟ್ಟಿಗರು ಮದುವೆಯಾಗಿದ್ದೀರಾ ರಾಕಿ ಎಂದು ಪದೇ ಪದೇ ಕಮೆಂಟ್ ಮಾಡಲು ಶುರು ಮಾಡಿದ್ದರು. ಆದರೆ ಸದ್ಯ ರಾಕಿ ಸಾವಂತ್ ಕಮೆಂಟಿಗರ ಟಾರ್ಚರ್ ಗೆ ತಲೆ ಕೆಟ್ಟು, “ನಾನು ಮದುವೆಯಾಗಿದ್ದೀನಿ. ನನ್ನ ಗಂಡನ ಹೆಸರು ರಿತೇಷ್. ಯುಕೆಯವರು ಅವರು ಈಗಾಗಲೆ ಯುಕೆಗೆ ಹೊರಟು ಹೋಗಿದ್ದಾರೆ. ನನ್ನ ವೀಸಾ ಬರಬೇಕಿದೆ. ಬಳಿಕ ನಾನು ಯುಕೆಯಲ್ಲಿ ನೆಲೆಸುತ್ತೇನೆ. ನಾನು ಯಾವಾಗಲು ಟಿವಿ ಶೋಗಳನ್ನು ನಿರ್ಮಾಣ ಮಾಡಲು ಬಯಸುತ್ತೇನೆ. ನನ್ನ ದೀರ್ಘಕಾಲದ ಕನಸು ಈಗ ಈಡೇರಿದೆ ಎಂದು ಬಯಸುತ್ತೇನೆ” ಎಂದು ಉತ್ತರಿಸಿ ಕಮೆಂಟಿಗರು ಕಂಗಾಲಾಗುವಂತೆ ಮಾಡಿದ್ದಾರೆ. ತೀರಾ ಖಾಸಗಿಯಾಗಿ ರಾಕಿ ಸಾವಂತ್ ಮದುವೆಯಾಗಿದೆ ಎಂದು ಹೇಳಲಾಗುತ್ತಿದ್ದು, ರಾಕಿ ಸಾವಂತ್ ಕುಟುಂಬ ಮತ್ತು ಆಪ್ತ ಸ್ನೇಹಿತರಷ್ಟೇ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top