ನಭಾ ನಟೇಶ್ ಕಾಲಿವುಡ್ ಗೆ ಎಂಟ್ರಿ!

Picture of Cinibuzz

Cinibuzz

Bureau Report

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಜ್ರಕಾಯ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ನಭಾ ನಟೇಶ್. ಆನಂತರ ಕನ್ನಡದ ಲೀ ಚಿತ್ರದಲ್ಲಿ ನಟಿಸಿ ತೆಲುಗಿನ ನನ್ನು ದೋಚುಕುಂದುವಟೆ ಎಂಬ ಸಿನಿಮಾದ ಮೂಲಕ ಟಾಲಿವುಡ್ ಗೂ ಎಂಟ್ರಿ ಪಡೆದರು. ಸದ್ಯ ಇಸ್ಮಾರ್ಟ್ ಶಂಕರ್ ಸಿನಿಮಾ ಯಶಸ್ವಿ ಪ್ರದರ್ಶನವಾಗುತ್ತಿದೆ. ಜತೆಗೆ ನಭಾ ನಟೇಶ್ ಗೆ ಎಲ್ಲಿಲ್ಲದ ಬೇಡಿಕೆಯೂ ಶುರುವಾಗಿದೆ. ಇಸ್ಮಾರ್ಟ್ ಶಂಕರ್ ಯಶಸ್ಸಿನ ಖುಷಿಯಲ್ಲಿರುವ ನಭಾ ನಟೇಶ್ ಕಾಲಿವುಡ್ ಗೂ ಇಷ್ಟರಲ್ಲೇ ಪದಾರ್ಪಣೆ ಮಾಡಲಿದ್ದಾರೆ.

ಇತ್ತೀಚಿಗಷ್ಟೇ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಲ್ಲಿ ತೊಡಗಿದ್ದ ನಭಾ ನಟೇಶ್ ಗೆ ಅಭಿಮಾನಿಯೊಬ್ಬರು ಯಾವಾಗ ತಮಿಳು ಸಿನಿಮಾ ರಂಗವನ್ನು ಪ್ರವೇಶ ಮಾಡುತ್ತೀರಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಉತ್ತರಿಸಿರುವ ನಭಾ ನಟೇಶ್, “ಸಿನಿಮಾ ಒಂದರಲ್ಲಿ ಅಭಿನಯಿಸಲು ಸಹಿ ಹಾಕಿದ್ದೇನೆ. ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ಪ್ರಕಟಿಸಲಿದೆ. ತಮಿಳು ಪ್ರೇಕ್ಷಕರನ್ನು ಶೀಘ್ರ ಭೇಟಿಯಾಗುತ್ತೇನೆ” ಎಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top