ಟೆರರಿಸ್ಟ್ ರೋಲ್ ನಲ್ಲಿ ಪೈಲ್ವಾನ್ ವಿಲನ್!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಗೆ ಎದುರಾಳಿಯಾಗಿ ತೊಡೆತಟ್ಟಿರುವ ಕಬೀರ್ ದುಹಾನ್ ಸಿಂಗ್ ಸದ್ಯ ತಮಿಳಿನ ಚಿತ್ರವೊಂದರಲ್ಲಿ ಟೆರರಿಸ್ಟ್ ರೋಲ್ ನಲ್ಲಿ ಮಿಂಚುಹರಿಸಲಿದ್ದಾರೆ. ಈ ಚಿತ್ರವನ್ನು ಸುಂದರ್ ಸಿ ನಿರ್ದೇಶನ ಮಾಡಲಿದ್ದು, ವಿಶಾಲ್ ನಾಯಕನಾಗಿ ನಟಿಸಲಿದ್ದಾರೆ.

ಕಾಲಿವುಡ್ ನ ಬಹುಬೇಡಿಕೆಯ ಸಿನಿಮಾ ಇದಾಗಿದ್ದು, ಇತ್ತೀಚಿಗಷ್ಟೇ ರಾಜಸ್ಥಾನದಲ್ಲಿ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಕಬೀರ್ ಸಿಂಗ್ ದುಹಾನ್ ಮಾಧ್ಯಮಗಳ ಜತೆ ಮಾತನಾಡಿ, ‘ಸುಂದರ್‌ ಸಿ ಮತ್ತು ವಿಶಾಲ್‌ ಅವರ ಜತೆ ಕೆಲಸ ಮಾಡಿದ್ದು ನನಗೆ ಖುಷಿ ಕೊಟ್ಟ ವಿಚಾರವಾಗಿದೆ. ಈ ಸಿನಿಮಾದ ಪಾತ್ರ ಬಹಳ ಚೆನ್ನಾಗಿದ್ದು ಚಿತ್ರ ಬಿಡುಗಡೆಯಾದ ಮೇಲೆ ತಮಿಳುನಾಡಿನಲ್ಲಿ ಇನ್ನಷ್ಟು ಮಂದಿ ಅಭಿಮಾನಿಗಳು ಹೆಚ್ಚಾಗುತ್ತಾರೆ’ ಎಂದು ಕಬೀರ್‌ ಹೇಳುತ್ತಾರೆ.

ಇನ್ನಷ್ಟು ಓದಿರಿ

Scroll to Top