ಯುವರತ್ನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ!

Picture of Cinibuzz

Cinibuzz

Bureau Report

ಬಹುತಾರಾಗಣದ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಚಿತ್ರೀಕರಣ ಹಂತ ಹಂತವಾಗಿಯೇ ಮುಗಿಯುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ಕಾಸ್ಟ್ ಗಳನ್ನೇ ಹೊಂದಿರುವ ಯುವರತ್ನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಇರಲಿದ್ದಾರಂತೆ. ಆದರೆ ಶಿವಣ್ಣ ನೇರವಾಗಿ ಯುವರತ್ನದಲ್ಲಿ ಅಭಿನಯಿಸದಿದ್ದರೂ ಪರೋಕ್ಷವಾಗಿ ಬಂದು ಹೋಗುತ್ತಾರೆ.

ಯೆಸ್.. ಇತ್ತೀಚಿಗೆ ಯುವರತ್ನ ಶೂಟಿಂಗ್ ನ ಮೇಕಿಂಗ್ ಸ್ಟಿಲ್ ಹೊರಬಿದ್ದಿದ್ದು, ಅದರಲ್ಲಿ ಎವರ್ ಗ್ರೀನ್ ಸಿನಿಮಾ ಓಂ ಸಿನಿಮಾ ಪೋಸ್ಟರ್ ಗಳು ರಾರಾಜಿಸಿದೆ. ಸತ್ಯನಾಗಿ ಹ್ಯಾಟ್ರಿಕ್ ಹೀರೋ ಯುವರತ್ನದಲ್ಲಿ ಕಾಣಿಸಿಕೊಳ್ಳುವುದು ಮಾತ್ರ ಗ್ಯಾರೆಂಟಿ ಆಗಿದೆ.  ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ನಿನ ಎರಡನೇ ಸಿನಿಮಾ ಇದಾಗಿದೆ. ಮೇಲಾಗಿ ಸಂತೋಷ್ ಆನಂದ್ ರಾಮ್ ಅವರಿಗಿದು ಹ್ಯಾಟ್ರಿಕ್ ಚಿತ್ರ ಕೂಡ.

ಇನ್ನಷ್ಟು ಓದಿರಿ

Scroll to Top