ಆರ್ಟಿಕಲ್ 15 ತಮಿಳು ರಿಮೇಕ್ ನಲ್ಲಿ ಧನುಷ್!

Picture of Cinibuzz

Cinibuzz

Bureau Report

ಇತ್ತೀಚಿಗಷ್ಟೇ ತೆರೆಕಂಡು ಸಾಕಷ್ಟು ಸದ್ದು ಮಾಡುತ್ತಿರುವ ಆರ್ಟಿಕಲ್ 15 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ವಿಮರ್ಶಕರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಈ ಚಿತ್ರವನ್ನು ಕಾಲಿವುಡ್ ಗೆ ರಿಮೇಕ್ ಮಾಡಲು ನಟ ಧನುಷ್ ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಯೆಸ್.. ಈಗಾಗಲೇ ಚಿತ್ರದ ರಿಮೇಕ್ ಹಕ್ಕಿನ ಕುರಿತಾಗಿ ಮಾತುಕತೆ ನಡೆಸಿದ್ದು, ಶೀಘ್ರವಾಗಿಯೇ ರಿಮೇಕ್ ಹಕ್ಕನ್ನು ಪಡೆದುಕೊಳ್ಳಲಿದ್ದಾರೆ. ಧನುಷ್‌ ಸೇರಿದಂತೆ ಕಾಲಿವುಡ್‌ನ ಅನೇಕರು ಸಿನಿಮಾದ ಹಕ್ಕು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ರಿಮೇಕ್‌ ಮಾಡುವುದೇ ಆದಲ್ಲಿ ಅದರಲ್ಲಿ ಧನುಷ್‌ ನಾಯಕನಾಗಿ ನಟಿಸುವರೇ ಅಥವಾ ನಿರ್ಮಾಪಕರಾಗಿ ಉಳಿಯಲಿದ್ದಾರೆಯೇ ಎಂಬುದು ಸದ್ಯದ ಗೊಂದಲವಾಗಿದೆ. ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಸುತ್ತಲಿನ ಘಟನಾವಳಿಯನ್ನು ಆರ್ಟಿಕಲ್ 15 ಆಧರಿಸಿದೆ. ಜಾತಿ ಮತ್ತು ಲಿಂಗ ತಾರತಮ್ಯದ ಕಥಾಹಂದರವನ್ನು ಹೊಂದಿದೆ

ಇನ್ನಷ್ಟು ಓದಿರಿ

Scroll to Top