ತುಘಲಕ್ ದರ್ಬಾರ್ ಚಿತ್ರದಲ್ಲಿ ಅದಿತಿ ರಾವ್ ಹೈದರಿ!

Picture of Cinibuzz

Cinibuzz

Bureau Report

ಸಿಂಧೂಬಾದ್ ಚಿತ್ರದ ಯಶಸ್ಸಿನ ನಂತರ ನಟ ವಿಜಯ್ ಸೇತುಪತಿ ನಟಿಸುತ್ತಿರುವ ಹೊಸ ಸಿನಿಮಾ ತುಫಲಕ್ ದರ್ಬಾರ್. ಈ ಚಿತ್ರವನ್ನು ಪ್ರಸಾದ್ ದೀನ ದಯಾಳ್ ನಿರ್ದೇಶನ ಮಾಡುತ್ತಿದ್ದು, ನಟಿ ಅದಿತಿ ರಾವ್ ಹೈದರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಸಾಕಷ್ಟು ಬೋಲ್ಡ್‌ ಪಾತ್ರ ಮತ್ತು ಖಡಕ್ ಮಾತುಗಳಿಗೆ ಹೆಸರಾಗಿರುವ ನಟಿ ಆದಿತಿ ರಾವ್‌ ಹೈದರಿ ಇದೇ ಮೊದಲ ಬಾರಿಗೆ ವಿಜಯ್‌ ಸೇತುಪತಿ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

ರಾಜಕೀಯ ಕಥಾಹಂದರ ಹೊಂದಿರುವ ತುಘಲಕ್ ದರ್ಬಾರ್ ಸಿನಿಮಾಕ್ಕೆ ಬಾಲಾಜಿ ತಾರಾನಿತರನ್ ಸಂಭಾಷಣೆ ಬರೆಯುತ್ತಿದ್ದು, ಸೆವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದ ವಸಂತ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಮಣಿರತ್ನಂ ನಿರ್ದೇಶನದ ಚೆಕ್ಕ ಚಿವಂತ ವಾನಂ ತಮಿಳು ಚಿತ್ರದಲ್ಲಿ ನಟಿಸಿದ್ದ ಅದಿತಿ ರಾವ್ ಸದ್ಯ ಮೈಸ್ಕಿನ್ ನಿರ್ದೇಶನದ ಸೈಕೋ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top