ಬಾಹುಬಲಿಯಲ್ಲಿ ನಟಿಸಿದ್ದ ನಟನ ಹೆಂಡತಿ ಆತ್ಮಹತ್ಯೆ

Picture of Cinibuzz

Cinibuzz

Bureau Report

ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದ ಕಿರುತೆರೆ ಕಲಾವಿದ ಮಧು ಪ್ರಕಾಶ್ ಅವರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧು ಪ್ರಕಾಶ್ ಅವರ ಪತ್ನಿ ಭಾತಿ ಮಂಗಳವಾರ ಹೈದರಾಬಾದ್ ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಮಧು ಅವರ ಜೀವನ ಶೈಲಿಯ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದ್ದು ಪತಿಗೆ ಅಕ್ರಮ ಸಂಬಂಧವಿದ್ದ ಬಗ್ಗೆ ಭಾರತಿ ಅನುಮಾನವನ್ನು ವ್ಯಕ್ತಪಡಿಸಿದ್ದರಂತೆ. 2015ರಲ್ಲಿ ಮಧು ಹಾಗೂ ಭಾರತಿ ವಿವಾಹವಾಗಿದ್ದು ಭಾರತಿ ಹೈದರಾಬಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಟ ಪ್ರತಿದಿನ ತಡವಾಗಿ ಮನೆಗೆ ಬರುತ್ತಿದ್ದದ್ದು ಪತಿ-ಪತ್ನಿಯರ ಜಗಳಕ್ಕೆ ಪ್ರಮುಖ ಕಾರಣವಾಗಿತ್ತು.

ಮಂಗಳವಾರ ಸಹ ಭಾರತಿ ಪತಿಗೆ ಬೇಗ ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಬೆಳಿಗ್ಗೆ ಹತ್ತಕ್ಕೆ ಶೂಟಿಂಗ್ ಗೆ ಹೊರಟಿದ್ದ ಮಧು ರಾತ್ರಿ ಏಳರ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಮರಳುವಷ್ಟರಲ್ಲಿ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ “ತಾನು ನೇಣು ಹಾಕಿಕೊಳ್ಳುತ್ತೇನೆ” ಎಂದು ಪತಿ ಮಧು ಅವರಿಗೆ ಭಾರತಿ ಸಂದೇಶ ರವಾನಿಸಿದ್ದಾರೆ. ಆದರೆ ನಟ ತನ್ನ ಪತ್ನಿ ಮಾತಿಗೆ ಖಂಡಿಸಿ ಉತ್ತರಿಸಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು ಮಧು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಓಸ್ಮಾನಿಯ ಜನರಲ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನಷ್ಟು ಓದಿರಿ

Scroll to Top