ಡಾಲಿ ಜೋಡಿಯಾಗಲಿದ್ದಾರಾ ಡಿಂಪಲ್ ಕ್ವೀನ್!

Picture of Cinibuzz

Cinibuzz

Bureau Report

ಫೆಬ್ರವರಿ ತಿಂಗಳಲ್ಲಿ ಧನಂಜಯ್ ನಾಯಕತ್ವದ ಡಾಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಮಿಕ್ಕಂತೆ ಯಾವ ಮಾಹಿತಿಯೂ ಲಭ್ಯವಿರಲಿಲ್ಲ. ಸದ್ಯ ಡಾಲಿ ಮತ್ತೆ ಪ್ರವರ್ಧಮಾನಕ್ಕೆ ಬಂದಿದ್ದು ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಸದ್ಯ ಡಾಲಿಗಾಗಿ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡವಿದ್ದು, ಡಿಂಪಲ್ ಕ್ವೀನ್ ಬಹುತೇಕ ಫೈನಲ್ ಆಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಡಾಲಿಯ ಕಥೆಯನ್ನು ಕೇಳಿರುವ ರಚಿತಾ ರಾಮ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಚಿತ್ರವನ್ನು ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದು, ಎರಡನೇ ಸಲ ಖ್ಯಾತಿಯ ಯೋಗೇಶ್ ನಾರಾಯಣ್ ಡಾಲಿಗೆ ಬಂಡವಾಳ ಹೂಡಲಿದ್ದಾರೆ. ಡಾಲಿಯಲ್ಲಿ ಧನಂಜಯ್ ಎರಡು ಶೇಡ್ ನ ಪಾತ್ರಗಳಲ್ಲಿ ನಟಿಸಲಿದ್ದು, ಸದ್ಯ ಸಲಗ, ಪಾಪ್ ಕಾರ್ನ್ ಮಂಕಿ ಟೈಗರ್, ಯುವರತ್ನ, ಪೊಗರು ಚಿತ್ರದಲ್ಲಿ ಬ್ಯುಸಿ ಇದ್ದು, ಸೆಪ್ಟೆಂಬರ್ ನಲ್ಲಿ ಡಾಲಿಗೆ ಸಮಯ ಹೊಂದಿಸಿಕೊಳ್ಳಲಿದ್ದಾರೆ. ಇನ್ನು ಮಾಸ್ತಿ ಸಂಭಾಷಣೆ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಡಾಲಿ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top