ಶ್ರದ್ಧಾ ಗೆ ಲಕ್ ತಂದುಕೊಟ್ಟ ಸಾಹೋ!

Picture of Cinibuzz

Cinibuzz

Bureau Report

ನಟಿಮಣಿಯರು ಯಾವುದಾದರೂ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ ಸಾಕು. ಆ ಸಿನಿಮಾ ಮುಗಿಯುವಷ್ಟರಲ್ಲಿ, ರಿಲೀಸ್ ಆಗುವಷ್ಟರಲ್ಲಿ, ಕೆಲವೊಮ್ಮೆ ಸಿನಿಮಾ ಹಿಟ್ ಆದ ಮೇಲೆ ಅವಕಾಶಗಳ ಸುರಿಮಳೆ ಸುರಿಯಲು ಆರಂಭವಾಗುತ್ತದೆ. ಸದ್ಯ ಸಾಹೋದಲ್ಲಿ ನಟಿಸಿ ಪ್ರಭಾಸ್ ಜತೆ ರೊಮ್ಯಾನ್ಸ್ ಮಾಡಿದ್ದ ಶ್ರದ್ಧಾಗೂ ಸಾಹೋ ಬಳಿಕ ಅದೃಷ್ಟ ಖುಲಾಯಿಸಿದಂತಿದೆ.

ಸಾಹೋ ಶೂಟಿಂಗ್ ಮುಗಿಯುತ್ತಿದ್ದಂತೆ ಶ್ರದ್ಧಾ ಇದೀಗ ಟೈಗರ್ ಶ್ರಾಫ್ ಅಭಿನಯದ ಭಾಗಿ 3 ತಂಡವನ್ನು ಸೇರಿಕೊಂಡಿದ್ದು, ಅವರಿಲ್ಲಿ ಗಗನಸಖಿಯ ಪಾತ್ರವನ್ನು ನಿಭಾಯಿಸಲಿದ್ದಾರೆ. ಅಹಮ್ಮದ್ ಖಾನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, 2016ರಲ್ಲಿ ರಿಲೀಸ್ ಆಗಿದ್ದ ಭಾಗಿಯಲ್ಲಿ ಶ್ರದ್ಧಾ ಟೈಗರ್ ಗೆ ಜೋಡಿ ನಟಿಸಿತ್ತು. ನಂತರ ರಿಲೀಸ್ ಆದ ಭಾಗಿ 2 ಚಿತ್ರದಲ್ಲಿ ದಿಶಾ ಪಟಾನಿ ನಾಯಕಿಯಾಗಿದ್ದರು. ಸದ್ಯ ಭಾಗಿ 3ಯಲ್ಲಿ ಶ್ರದ್ಧಾ ಕಪೂರ್ ಭಾಗಿಯಾಗಲಿದ್ದಾರೆ.

ಇನ್ನಷ್ಟು ಓದಿರಿ

Scroll to Top