ಮಕ್ಕಳನ್ನು ಹೆರಲು ಮದುವೆಯಾಗಬೇಕಿಲ್ಲ: ಶಮಾ ಸಿಕಂದರ್

Picture of Cinibuzz

Cinibuzz

Bureau Report

ಕಿರುತೆರೆಯ ಮೂಲಕ ಎಂಟ್ರಿಕೊಟ್ಟು ನಂತರ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಸುಂದರಿಯಾಗಿ ಲೈಮ್ ಲೈಟಿಗೆ ಬಂದ ನಟಿ ಶಮಾ ಸಿಕಂದರ್. ಸದ್ಯ ಈಕೆ ನೀಡಿರುವ ಹೇಳಿಕೆಯೊಂದು ಸಾಕಷ್ಟು ಸದ್ದು ಮಾಡುತ್ತಿದೆ. ಯೆಸ್.. ಇತ್ತೀಚಿಗೆ ಶಮಾ ಮಕ್ಕಳನ್ನು ಹೆರಲು ಮದುವೆಯಾಗಬೇಕಿಲ್ಲ. ತಾವಾಗ ಹುಟ್ಟಿದ್ದರೂ ಅವು ನೆಚ್ಚಿನ ಮಕ್ಕಳೇ ಎಂದು ಹೇಳುವ ಮೂಲಕ ಟ್ರೋಲಿಗರು ಕಣ್ಣು ಕಣ್ಣು ಬಿಡುವಂತೆ ಮಾಡಿದ್ದಾರೆ.

ಏ ಮೇರಿ ಲೈಫ್ ಹೈ ಎಂಬ ಧಾರವಾಹಿಯ ಮೂಲಕ ಕಿರುತೆರೆ  ಪ್ರವೇಶಿಸಿದ ಶಮಾ ಕೆಲವು ದಿನಗಳ ಹಿಂದಷ್ಟೇ ರೆಡ್ ಬಿಕಿನಿ ತೊಟ್ಟು ಕಡಲ ತಡಿಯಲ್ಲಿ ಯೋಗ ಮಾಡುತ್ತಾ ಕುಳಿತ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಜತೆಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು. ಇದಾಗಿದ್ದೇ ತಡ ಶಮಾ ಟಾಪ್‌ಲೆಸ್ ಫೋಟೋ ಶೂಟ್ ಮಾಡಿಸಿ ಮತ್ತೆ ಯುವಕರಿಗೆ ಮೈ ಬಿಸಿ ಏರಿಸಿದ್ದಳು.  ಬಿಕಿನಿ ಧರಿಸುವುದಕ್ಕೂ ಸಂತಸ ವ್ಯಕ್ತಪಡಿಸಿದ್ದ ಶಮಾ ಬಿಕಿನಿ ಹಾಕಿದಾಗ ನನಗೆ ಖುಷಿಯಾಗುತ್ತದೆ. ಅದಕ್ಕೆ ಕೆಲವರು ವಿರೋಧ ಮಾಡುತ್ತಾರೆ. ಅವಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದರ ಅಗತ್ಯವೂ ನನಗೆ ಇಲ್ಲ ಎಂದಿದ್ದಾಳೆ. ಜತೆಗೆ ಮದುವೆಯಾಗಿಯೇ ಮಕ್ಕಳಾಗಬೇಕಾಗಿಲ್ಲ. ಯಾವಾಗ ಹುಟ್ಟಿದ್ರೂ ಅವ್ರು ನೆಚ್ಚಿನ ಮಕ್ಕಳೇ ಎಂದು ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟು ಕಮೆಂಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಇದಕ್ಕೆ ಕೆಲವರು ಸಮ್ಮತಿಸಿದರೆ, ಹಲವರು ಸಂಸ್ಕೃತಿ, ಸೌಜನ್ಯ ಎಂದು ಖಾರವಾಗಿ ಕಮೆಂಟ್​ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top