ನಾತಿಚರಾಮಿ ಸಿನಿಮಾವು ಸಾಲು ಸಾಲು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದೆ ಎಂಬ ಸಂಭ್ರಮದಲ್ಲಿರುವಾಗಲೇ ಶೃತಿ ಹರಿಹರನ್ ಮನೆಗೆ ಹೆಣ್ಣು ಮಗುವಿನ ಆಗಮನ ಖುಷಿಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೇ ತಾಯಿ ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕಳೆದ ತಿಂಗಳು ಶ್ರುತಿ ಹರಿಹರನ್ ಗರ್ಭಿಣಿಯಾಗಿರುವ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ತಮ್ಮ ಬೇಬಿ ಬಂಪ್ ಗೆ ಸಂಬಂಧಿಸಿದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದ ಶ್ರುತಿ, ‘ನನ್ನೊಳಗಿನ ಹೃದಯ ಬಡಿತವನ್ನು ಜೀವನದಲ್ಲಿ ಆಲಿಸುವಾಗ, ಹೊಸ ಜೀವನದ ಪ್ರಾರಂಭವಾಗುತ್ತಿದೆ ಎಂಬುದು ಅರಿವಾಗುವಾಗ, ಈ ಕ್ಷಣವನ್ನು ಅನುಭವಿಸುವಾಗ, ನಿನ್ನನ್ನು ನೋಡಲು ಹೆಚ್ಚು ಕಾಯಲು ಆಗುತ್ತಿಲ್ಲ’ ಎಂದು ಬರೆದುಕೊಂಡಿದ್ದರು. ಅವರ ಕಾಯುವಿಕೆಯನ್ನು ನೀಗಿಸಲು ಪುಟ್ಟ ಕಂದಮ್ಮನ ಪ್ರವೇಶವಾಗಿದೆ.











































