ಟ್ವಿಟರ್ ಖಾತೆ ಹೆಸರು ಬದಲಿಸಿಕೊಂಡ ದರ್ಶನ್ ಪತ್ನಿ!

Picture of Cinibuzz

Cinibuzz

Bureau Report

ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಮನಸ್ತಾಪ ಇಂದು ನಿನ್ನೆಯದಲ್ಲ. ಸಂಸಾರ ಅಂದಮೇಲೆ ಜಗಳ ರೊಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರುತ್ತದೋ ಆಗ ಚಿಕ್ಕದ್ದು ದೊಡ್ಡದ್ದಾಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇರುತ್ತದೆ. ದರ್ಶನ್ ವಿಚಾರದಲ್ಲಿಯೂ ಅದೇ ಆಗಿದ್ದು, ಬಿಡಿ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ವಿಜಯಲಕ್ಷ್ಮಿ ದರ್ಶನ್ ಇತ್ತೀಚಿಗೆ ತಮ್ಮ ಟ್ವಿಟರ್ ಖಾತೆಯ ಹೆಸರನ್ನು ಬದಲಿಸಿಕೊಂಡಿರೋದು ಮತ್ತೆ ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವೆ ಏನಾದರೂ ಮನಸ್ಥಾಪವಾಗಿದೆಯೇ ಎಂಬ ಅನುಮಾನಗಳು ಹುಟ್ಟಲು ಕಾರಣವಾಗಿದೆ. ಟ್ವಿಟರ್​ ಖಾತೆಯಲ್ಲಿ ವಿಜಯಲಕ್ಷ್ಮೀ ದರ್ಶನ್​ ಎಂದಿದ್ದ ಹೆಸರನ್ನು ಬದಲಿಸಿ ಬರೀ ವಿಜಯಲಕ್ಷ್ಮೀ ಎಂದಷ್ಟೇ ಉಳಿಸಿಕೊಂಡಿದ್ದಾರೆ. ಇನ್ನು ದರ್ಶನ್​ ಅನ್ನೋ ಹೆಸರನ್ನು ತೆಗೆದುಹಾಕಿರುವ ಬಗ್ಗೆ ಟ್ವಿಟರ್‌ ನಲ್ಲಿ ಹೇಳಿಕೊಂಡಿರುವ ವಿಜಯಲಕ್ಷ್ಮಿ ಈ ರೂಮರ್​ಗಳೆಲ್ಲ ಆಧಾರವಿಲ್ಲದೆ ಹಬ್ಬಿಕೊಂಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಆದರೆ ಹೆಸರನ್ನು ಯಾವ ಕಾರಣಕ್ಕೆ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಮಾತ್ರ ಸುಳಿವು ಬಿಟ್ಟಿಲ್ಲ.

ಇನ್ನಷ್ಟು ಓದಿರಿ

Scroll to Top