ಮೌನಂ ಚಿತ್ರಕ್ಕೆ ಡಿಟಿಎಸ್ ಎಫೆಕ್ಟ್!

Picture of Cinibuzz

Cinibuzz

Bureau Report

ನಿಹಾರಿಕ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ಮೌನಂ ಚಿತ್ರಕ್ಕೆ ಡಿಟಿಎಸ್ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರವನ್ನು ರಾಜ್ ಪಂಡಿತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಮೌನಂ ನಲ್ಲಿ ಅವಿನಾಶ್ 6 ಶೇಡ್ ಗಳಿರುವ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದು ಹೋಮ್ಲಿ ಮತ್ತು ಆಕ್ಷನ್ ಸೀಕ್ವೆನ್ಸ್ ಗಳಲ್ಲಿ ಕೃಷ್ಣ ಲೀಲಾ ಮಯೂರಿ ಸಕ್ಕತ್ತಾಗಿ ಮಿಂಚಿದ್ದಾರೆ. ಉಳಿದಂತೆ ಅಮೃತ ವರ್ಷಿಣಿ ಖ್ಯಾತಿಯ ಬಾಲಾಜಿ ಶರ್ಮ, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ ಚಿತ್ರದಲ್ಲಿದ್ದಾರೆ.

ಮನುಷ್ಯನಿಗೆ ಮನುಷ್ಯನೇ ಶತ್ರು. ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಿರುವ ಶತ್ರುವನ್ನು ಮಟ್ಟಹಾಕಬೇಕು ಎನ್ನುವುದು ಮೌನಂ ಚಿತ್ರದ ಒಂದೆಳೆ. ಇನ್ನು ಶಂಕರ್ ಛಾಯಾಗ್ರಹಣ, ಆರವ್ ರಿಶಿಕ್ ಸಂಗೀತ, ಗುರುಮೂರ್ತಿ ಹೆಗಡೆ ಸಂಕಲನ, ಕೌರವ ವೆಂಕಟೇಶ್ ಮತ್ತು ಅಲ್ಟಿಮೇಟ್ ಶಿವು ಸಾಹಸ, ಆಕಾಶ್ ಎಸ್ ಸಾಹಿತ್ಯ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top