ಡಬ್ಬಿಂಗ್ ಮುಗಿಸಿಕೊಂಡ “19  AGE IS  ನಾನ್‍ಸೆನ್ಸ್?”

Picture of Cinibuzz

Cinibuzz

Bureau Report

ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್. ಲೋಕೇಶ್ ನಿರ್ಮಾಣ ಮಾಡುತ್ತಿರುವ ಸಿನಿಮಾ 19  AGE IS  ನಾನ್‍ಸೆನ್ಸ್. ಈ ಚಿತ್ರವನ್ನು ಕಥೆ, ಚಿತ್ರಕಥೆ ಸಂಭಾಷಣೆ ಬರೆಯುವ ಜತೆಗೆ ಗಿಣಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ ಇತ್ತೀಚಿಗಷ್ಟೇ ಚಾಮರಾಜಪೇಟೆಯ ಅರುಣ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯವನ್ನು ಪೂರ್ಣಗೊಳಿಸಿದೆ.

ರೊಮ್ಯಾಂಟಿಕ್ ಲವ್ ಸ್ಟೋರಿ ಜತೆಗೆ ಆ್ಯಕ್ಷನ್ ಸೀಕ್ವೆನ್ಸ್ ನ ಈ ಸಿನಿಮಾ 19 ರಿಂದ 25 ವಯೋಮಿತಿ ಹರೆಯದ ವಯಸ್ಸಿನವರ ನಾಯಕಿಯ ತೊಳಲಾಟವನ್ನು ಆಕೆಯ ಜೀವನದಲ್ಲಿ ನಡೆಸುವ ಕಥಾ ಹಂದರದ ಮೇಲೆ ಬೆಳಕು ಚೆಲ್ಲಲಿದೆ. ಚಿತ್ರದ ತಾರಾಗಣದಲ್ಲಿ ಮನುಷ್, ಮಧುಮಿತ, ಮೇಸ್ತ್ರಿ ಬಾಲು, ಸೌಭಾಗ್ಯ, ಶ್ರೀಲಕ್ಷ್ಮಿ, ಕಾವ್ಯ ಪ್ರಕಾಶ್ ರಂಗಸ್ವಾಮಿ ಇತರರಿದ್ದಾರೆ. ಇನ್ನು ಜಿ. ವೆಟ್ರಿ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಕುಟ್ಟಿ ಸಂಗೀತ, ಶಿವು ಸಾಹಸ, ವಿ ನಾಗೇಂದ್ರ ಪ್ರಸಾದ್ ಗೀತಸಾಹಿತ್ಯ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top