ಭಾರತದಲ್ಲಿ ಸೆನ್ಸಾರ್ ಕಟ್ ಆದ ಫೋಟೋ ಅಮೆರಿಕಾದಲ್ಲಿ ಲೀಕ್!

Picture of Cinibuzz

Cinibuzz

Bureau Report

ಸಾಮಾನ್ಯವಾಗಿ ನಟಿಮಣಿಯರ ಲಿಪ್ ಲಾಕ್ ಸೀನುಗಳು ಈಗೀಗ ಸಾಕಷ್ಟು ಸುದ್ದಿಯಾಗುತ್ತವೆ. ಸಾಕಷ್ಟು ನಟಿಮಣಿಯರು ಇದೇ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಸಿಕೊಳ್ಳುವ ಸ್ಥಿತಿಗೆ ತಲುಪುತ್ತಾರೆ. ಸದ್ಯ ಇಂತಹುದೇ ಸ್ಥಿತಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ಇದ್ದಾರೆ. ಹೌದು.. ಇತ್ತೀಚಿಗೆ ರಿಲೀಸ್ ಆದ ಅವರ ಮನ್ಮಥುಡು 2 ಚಿತ್ರದ ಸೀನೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆಶ್ಚರ್ಯವೇನೆಂದರೆ ಆ ಸೀನಿಗೆ ಭಾರತೀಯ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಆದರೆ ಅಮೆರಿಕಾದಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಿದ್ದು, ಆ ಸೀನು ಅಲ್ಲಿ ಪ್ರದರ್ಶನಗೊಂಡು ಅದರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮನ್ಮುಥುಡು ಚಿತ್ರದ ದೃಶ್ಯವೊಂದರಲ್ಲಿ ರಾಕುಲ್ ಆ್ಯಂಕರ್ ಝಾನ್ಸಿಯನ್ನು ಎಳೆದು ತುಟಿಗೆ ಚುಂಬಿಸುತ್ತಾರೆ. ಇದೇ ಫೊಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ಅನೇಕರು ರಾಕುಲ್ ಕಾಲೆಳೆದಿದ್ದು,  ‘ರಾಕುಲ್​ ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿದ್ದೆ. ಆದರೆ ನೀವು ಲೆಸ್ಬಿಯನ್​ ಎಂಬುದು ನನಗೆ ಗೊತ್ತಿರಲಿಲ್ಲ,’ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಚಿತ್ರದ ನಿರ್ದೇಶಕನ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನಷ್ಟು ಓದಿರಿ

Scroll to Top