ಅಕಿರಾ ಮತ್ತು ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರಗಳ ನಂತರ ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡು ಭರವಸೆಯ ನಾಯಕನಾಗಿ ನಿಂತಿರುವ ಅನೀಶ್ ಇದೀಗ ನಟನೆಯ ಜತೆಗೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಅಲ್ಲದೇ ಅವರ ನಿರ್ದೇಶನದ ಚಿತ್ರಕ್ಕೆ ರಾಮಾರ್ಜುನ ಎಂದು ಟೈಟಲ್ ಇಡಲಾಗಿದೆ.
ತಿಂಗಳ ಹಿಂದಷ್ಟೇ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಚಿತ್ರತಂಡ ರಾಮಾರ್ಜುನ ಚಿತ್ರದ ಎರಡನೇ ಟೀಸರ್ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 19ರಂದು ಟೀಸರ್ ಬಿಡುಗಡೆಯಾಗುವ ಸಾಧ್ಯತೆಯೂ ಇದೆ. ಇನ್ನು ಅನೀಶ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದು, ನವೀನ್ ಅಕ್ಷಿ ಛಾಯಾಗ್ರಹಣ, ಆನಂದ್ ವಿಕ್ರಮ್ ಸಂಗೀತ ಚಿತ್ರಕ್ಕಿದೆ.











































