ಕಿಶೋರ್ ಹಾಗೂ ಪ್ರಿಯಾಮಣಿ ಕಾಂಬಿನೇಷನ್ನಿನಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ. ಇದೇ ಆಗಸ್ಟ್ 23ಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿರುವ ಚಿತ್ರತಂಡ ರಾಜ್ಯಾದ್ಯಂತ ಅವರದೇ ಪ್ರಕಾರದ ಕಥೆಯನ್ನು ಹೇಳಲು ರೆಡಿಯಾಗಿದೆ. ಈ ಮಧ್ಯೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ನನ್ನ ಪ್ರಕಾರದ ಟ್ರೇಲರ್ ನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ವಿಶೇಷವೆಂದರೆ ಈ ಟ್ರೇಲರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆಂಬುದು ಸದ್ಯದ ಸುದ್ದಿ.

ಪಕ್ಕಾ ದರ್ಶನ್ ಅಭಿಮಾನಿಯಾಗಿರುವ ನನ್ನ ಪ್ರಕಾರ ಚಿತ್ರದ ನಿರ್ದೇಶಕ ವಿನಯ್ ಬಾಲಾಜಿ ಅವರ ಬಹುದಿನಗಳ ಕನಸಿನ ಮೇರೆಗೆ ಸದಾ ಹೊಸಬರಿಗೆ ಆದ್ಯತೆ ನೀಡುವ ದರ್ಶನ್ ಟ್ರೇಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಆಗಸ್ಟ್ 15ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನನ್ನ ಪ್ರಕಾರದ ಟ್ರೇಲರ್ ಬಿಡುಗಡೆಯಾಗಿದ್ದು, ಕುರುಕ್ಷೇತ್ರದ ಖುಷಿಯಲ್ಲಿರುವ ದರ್ಶನ್ ಗೆ ಚಿಕ್ಕ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.











































