ಸದ್ಯದಲ್ಲೇ ಬಿಡುಗಡೆಯಾಗಲಿದೆ ಜಿಗ್ರಿ ದೋಸ್ತ್!

Picture of Cinibuzz

Cinibuzz

Bureau Report

ಎ.ಎನ್.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ. ಎನ್. ಗಂಗಾಧರ್ ಅವರು ನಿರ್ಮಿಸುತ್ತಿರುವ ಹೊಸ ಸಿನಿಮಾ ಜಿಗ್ರಿ ದೋಸ್ತ್. ಕಥೆ, ಚಿತ್ರಕಥೆ ಬರೆದು ಎಸ್. ಮೋಹನ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಾಧಾರಮಣ ಖ್ಯಾತಿಯ ಸ್ಕಂದ ಅಶೋಕ್ ಮತ್ತು ಚೇತನ್ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ವಿನೋದ್ ಆಳ್ವಾ, ಸುಷ್ಮ, ಅಕ್ಷತ ಪ್ರಮುಖ ಪಾತ್ರದಲ್ಲಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಮೊದಲ ಪ್ರತಿಯನ್ನು ರೆಡಿ ಮಾಡಿ ಸೆನ್ಸಾರ್ ಮಂಡಳಿಗೂ ಕಳುಹಿಸಿದ್ದರು. ಯಾವುದೇ ಕಟ್ಟು ಮ್ಯೂಟಿಲ್ಲದೇ ಸೆನ್ಸಾರ್ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಎಲ್ಲ ಅಂದುಕೊಂಡಂತಾದರೆ ಜಿಗ್ರಿ ದೋಸ್ಟ್ ಸದ್ಯದಲ್ಲೇ ಬಿಡುಗಡೆಯಾಗಿದೆ. ವಿಶೇಷವೆಂದರೆ ಹಿರಿಯ ನಟ ವಿನೋದ್ ಆಳ್ವಾ ನಟಿಸಿರುವ ಬಹುತೇಕ ಸಿನಿಮಾಗಳ ಯಾವುದಕ್ಕೂ ಡಬ್ಬಿಂಗ್ ಮಾಡಿರಲಿಲ್ಲ. ಆದರೆ ಜಿಗ್ರಿ ದೋಸ್ತ್ ನಲ್ಲಿ ಚೊಚ್ಚಲ ಬಾರಿಗೆ ಸ್ವತಃ ಡಬ್ಬಿಂಗ್ ಮಾಡಿದ್ದಾರಂತೆ.

ಇನ್ನಷ್ಟು ಓದಿರಿ

Scroll to Top