ಡೈರೆಕ್ಟರ್ ಡ್ರೀಂ ಕ್ರಿಯೇಷನ್ಸ್ ಲಾಂಛನದಲ್ಲಿ ಗಿರೀಶ್ ಜಿ. ರಾಜ್ ನಿರ್ಮಿಸಿರುವ ಹೊಸ ಸಿನಿಮಾ ಯಾವಾಗಲೂ ನಿನ್ನೊಂದಿಗೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತವನ್ನು ಕಂಪ್ಲೀಟ್ ಮಾಡಿಕೊಂಡಿರುವ ಚಿತ್ರತಂಡ ಸೆನ್ಸಾರ್ ಮಂಡಳಿಗೆ ಪ್ರಥಮ ಪ್ರತಿಯನ್ನು ಕಳುಹಿಸಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಯಾವಾಗಲೂ ನಿನ್ನೊಂದಿಗೆ ಚಿತ್ರದ ಮೂಲಕ ನಾಯಕನಾಗಿ ರೂಪೇಶ್ ಜಿ ರಾಜ್ ಅಭಿನಯಿಸಿದ್ದು, ಅರ್ಚನ ನಾಯಕಿಯಾಗಿ ಜತೆಯಾಗಿದ್ದಾರೆ. ಉಳಿದಂತೆ ವಿ ಮನೋಹರ್, ಹರೀಶ್ ರಾಯ್, ಟೆನ್ನಿಸ್ ಕೃಷ್ಣ, ಕುರಿ ರಂಗ ಅಭಿನಯಿಸಿದ್ದಾರೆ. ರೂಪೇಶ್ ಜಿ ರಾಜ್ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ ಸಂಯೋಜನೆ, ರೇಣು ಕುಮಾರ್ ಛಾಯಾಗ್ರಹಣ, ಲಿಂಗರಾಜ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.











































