ಗೂಗಲ್ ಸರ್ಚ್ ನಲ್ಲಿ ಸನ್ನಿಲಿಯೋನ್ ಫಸ್ಟ್ ಪ್ಲೇಸ್!

Picture of Cinibuzz

Cinibuzz

Bureau Report

ಕಳೆದ ವರ್ಷವೂ ಗೂಗಲ್ ಟ್ರೆಂಡ್ ನಲ್ಲಿ ಟಾಪ್ ಸ್ಥಾನವನ್ನು ಉಳಿಸಿಕೊಂಡಿದ್ದ ಸನ್ನಿಲಿಯೋನ್ ಈ ವರ್ಷವೂ ಗೂಗಲ್ ನಲ್ಲಿ ಅತ್ಯಧಿಕ ಸರ್ಚ್ ಮಾಡಿರುವ ತಾರೆಯಾಗಿ ಹೊರಹೊಮ್ಮಿದ್ದಾರೆ. ಈ ವರ್ಷ ಪ್ರಧಾನಿ ನರೇಂದ್ರ ಮೋದಿ, ಶಾರುಖ್ ಖಾನ್, ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿರುವ ಸನ್ನಿಲಿಯೋನ್ ಗೂಗಲ್ ಟ್ರೆಂಡ್ ಅನಾಲಿಟಿಕ್ಸ್ ಪ್ರಕಾರ ಸನ್ನಿ ಬಯೋಪಿಕ್ ಸಿರೀಸ್ ‘ಕರಂಜಿತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್‌’ಗೆ ಬದಲಾಗಿ ಅವರ ರೋಚಕ ವೀಡಿಯೊಗಳಿಗಾಗಿ ಅತ್ಯಧಿಕ ಸಂಖ್ಯೆಯಲ್ಲಿ ಮುಗಿಬಿದ್ದು ಹುಡುಕಾಡಿದ್ದಾರೆ.

ವಿಶೇಷವೆಂದರೆ ಸನ್ನಿ ಲಿಯೋನ್ ಕುರಿತಾದ ವಿಡಿಯೋಗಳನ್ನು ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂ ಸರ್ಚ್ ಮಾಡಿದ್ದಾರೆಂಬುದು ತಿಳಿದುಬಂದಿದೆ. ಈ ಕುರಿತು ಸನ್ನಿಲಿಯೋನ್ ಸಂತಸ ವ್ಯಕ್ತಪಡಿಸಿದ್ದು, “ಈ ಸಂಗತಿಯನ್ನು ನನ್ನ ತಂಡ ನನ್ನ ಗಮನಕ್ಕೆ ತಂದಿದೆ. ಇದು ಮರೆಯಲಾಗದ ಅನುಭವ” ಎಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top