ಭಾರತ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿರುವ ನಟ ವಿಜಯ್ ಸೇತುಪತಿ. ಸದಬಿರುಚಿಯ ಸಿನಿಮಾಗಳನ್ನು ಹಾಗೂ ಸವಾಲಿನ ಪಾತ್ರಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುವ ವಿಜಯ್ ಸೇತುಪತಿ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ವಿಜಯ್ ಸೇತುಪತಿ ಸಿನಿ ಜೀವನದಲ್ಲಿ ಹಿಂದಿ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಸದ್ಯ ಆ ಆಸೆಯೂ ಈಡೇರಲಿದ್ದು, ಅಮಿರ್ ಖಾನ್ ನಾಯಕತ್ವದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಸೇತುಪತಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ.

ಇತ್ತೀಚಿಗೆ ಮೆಲ್ಬೋರ್ನ್ ನಲ್ಲಿ ನಡೆದ ಇಂಡಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಈ ಕುರಿತು ಸುಳಿವು ನೀಡಿರುವ ಸೇತುಪತಿ, ‘ಸಂಗ ತಮಿಳನ್’ ಶೂಟಿಂಗ್ ವೇಳೆ ಆಮಿರ್ ತಮಿಳುನಾಡಿಗೆ ಹೋಗಿ ಸೇತುಪತಿಯನ್ನು ಭೇಟಿಯಾಗಿದ್ದರಂತೆ. ‘ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದ್ದಾರೆ.











































