ರಕ್ಷಾಬಂಧನ ಆಚರಿಸಿಕೊಂಡ ಸನ್ನಿಲಿಯೋನ್!

Picture of Cinibuzz

Cinibuzz

Bureau Report

ಬಾಲಿವುಡ್ ಮಾದಕ ನಟಿ ಸನ್ನಿಲಿಯೋನ್ ತಮ್ಮ ರಿಯಾಲಿಟಿ ಶೋ ಒಂದರ ಸಹ ತೀರ್ಪುಗಾರರಾಗಿರುವ ರಣ ವಿಜಯ್ ಸಿಂಘ ಅವರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಿಕೊಂಡಿದ್ದಾರೆ. ಈ ಕುರಿತ ಫೊಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಸನ್ನಿ, ವೆರಿ ಸ್ಪೆಷಲ್‌ ರಕ್ಷಾಬಂಧನ್‌ ಡೇ ಎಂದು ಬರೆದುಕೊಂಡಿದ್ದಾರೆ.

ಸನ್ನಿ ತಮ್ಮ ಮನೆಯಲ್ಲೂ ಇದೇ ಮೊದಲ ಬಾರಿಗೆ ತಮ್ಮ ಮಕ್ಕಳೊಂದಿಗೆ ರಾಖಿ ಹಬ್ಬ ಆಚರಿಸಿಕೊಂಡಿದ್ದು, ತಮ್ಮ ಪುಟಾಣಿ ಮಕ್ಕಳಿಗೆ ಚೆಂದನೆಯ ರಾಖಿ ಕಟ್ಟುತ್ತಿರುವ ಫೋಟೋವನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರ ಪುತ್ರಿ ನಿಶಾ ತನ್ನ ತಮ್ಮನಿಗೆ ರಾಖಿ ಕಟ್ಟುತ್ತಿರುವ ದೃಶ್ಯವಿದೆ.

ಇನ್ನಷ್ಟು ಓದಿರಿ

Scroll to Top