ಶ್ರೀದೇವಿ: ಗರ್ಲ್ ವುಮನ್‌ ಸೂಪರ್‌ ಸ್ಟಾರ್‌ ಪುಸ್ತಕ ಅಕ್ಟೋಬರ್ ಗೆ ಲೋಕಾರ್ಪಣೆ!

Picture of Cinibuzz

Cinibuzz

Bureau Report

ಬಾಲಿವುಡ್ ನ ಮೊದಲ ಲೇಡಿ ಸೂಪರ್ ಸ್ಟಾರ್ ಲೇಟ್ ಶ್ರೀದೇವಿಯವರ ಲೈಫ್ ಕುರಿತಾದ ಪುಸ್ತಕವೊಂದು ರೆಡಿಯಾಗಿದ್ದು, ಇದರ ಅಧಿಕೃತ ಕವರ್ ಪೇಜ್ ನ್ನು ಇತ್ತೀಚಿಗೆ ನಟಿ ವಿದ್ಯಾ ಬಾಲನ್ ಬಿಡುಗಡೆಗೊಳಿಸಿದ್ದಾರೆ. ಶ್ರೀದೇವಿ: ಗರ್ಲ್ ವುಮನ್‌ ಸೂಪರ್‌ ಸ್ಟಾರ್‌ ಎಂಬ ಟೈಟಲ್‌ ಇರುವ ಈ ಕೃತಿಯು ಶ್ರೀದೇವಿಯರ ಬದುಕು ಮತ್ತು ಅವರ ಸಿನಿ ಪಯಣದ ಕುರಿತು ಬೆಳಕು ಚೆಲ್ಲಲಿದೆ.

ಪೆಂಗ್ವಿನ್‌ ರಾರ‍ಯಂಡಮ್‌ ಹೌಸ್‌ ಇಂಡಿಯಾ ಪ್ರಕಟಿಸಲಿರುವ ಈ ಕೃತಿಯ ಮುಖಪುಟವನ್ನು ವಿದ್ಯಾ ಬಾಲನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, “ಐಕಾನಿಕ್‌ ನಟಿ ಶ್ರೀದೇವಿಯರ 56ನೇ ಜನ್ಮದಿನದಂದು ಅವರ ಬದುಕಿನ ಕುರಿತಾದ ಕೃತಿಯ ಮುಖಪುಟವನ್ನು ಲಾಂಚ್‌ ಮಾಡುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಐದು ದಶಕಗಳಲ್ಲಿ ಶ್ರೀದೇವಿಯವರ ಅದ್ಭುತ ಸಿನಿ ಜೀವನ, ಕೌಟುಂಬಿಕ ಜೀವನ ಇತ್ಯಾದಿಗಳ ಕುರಿತು ಈ ಕೃತಿಯಲ್ಲಿ ಮಾಹಿತಿ ಇರಲಿದೆ” ಎಂದು ವಿದ್ಯಾ ಬಾಲನ್ ಬರೆದುಕೊಂಡಿದ್ದಾರೆ. ಲೇಖಕ ಮತ್ತು ಸ್ಕ್ರೀನ್‌ ರೈಟರ್‌ ಸತ್ಯಾರ್ಥ ನಾಯಕ್‌ ಬರೆದಿರುವ ಈ ಪುಸ್ತಕ ಇದೇ ಅಕ್ಟೋಬರ್‌ಗೆ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top