ಬಾಲಿವುಡ್ ಮೈದಾನ್ ನಲ್ಲಿ ಕೀರ್ತಿ ಸುರೇಶ್!

Picture of Cinibuzz

Cinibuzz

Bureau Report

ಮಹಾನಟಿ ತಮಿಳಿನ ಕೀರ್ತಿ ಸುರೇಶ್ ನಟಿಸುತ್ತಿರುವ ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ಮೈದಾನ್ ಎಂಬ ಟೈಟಲ್ ಇಡಲಾಗಿದೆಯಂತೆ. ಭಾರತೀಯ ಫುಟ್ ಬಾಲ್ ನ ಸುವರ್ಣ ಯುಗದ ಕಥೆಯಿರುವ ಈ ಸಿನಿಮಾದ ಮೂಲಕ ಕೀರ್ತಿ ಸುರೇಶ್ ಬಿ ಟೌನಿಗೆ ಎಂಟ್ರಿ ಪಡೆಯಲಿದ್ದು, ಅಜಯ್ ದೇವಗನ್ ಮೈದಾನ್ ಗೆ ನಾಯಕನಾಗಿ ನಟಿಸಲಿದ್ದಾರೆ.

ಬದಾಯಿ ಹೋ ಸಿನಿಮಾ ನಿರ್ದೇಶಿಸಿದ್ದ ಅಮಿತ್‌ ರವೀಂದರ್‌ನಾಥ್‌ ಶರ್ಮ ಅವರು ಮೈದಾನ್‌ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇತ್ತೀಚೆಗೆ ಮಹಾನಟಿ ಸಿನಿಮಾದ ನಟನೆಗಾಗಿ ಶ್ರೇಷ್ಠ ನಟಿ ರಾಷ್ಟ್ರಪ್ರಶಸ್ತಿ ಪಡೆದಿರುವ ಕೀರ್ತಿ, ಸದ್ಯಕ್ಕೆ ತಮಿಳಿನ ಕೊಡೈಕೆನಾಲ್‌ ಎಂಬ ಟೈಟಲ್‌ ಇರುವ ಥ್ರಿಲ್ಲರ್‌ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top