ಟ್ವಿಟರ್ ನೇಮ್ ಬದಲಿಸಿಕೊಂಡ Rapper ನಿಕಿ ಮಿನಾಜ್!

Picture of Cinibuzz

Cinibuzz

Bureau Report

ಅಮೆರಿಕಾದ ಖ್ಯಾತ Rapper ನಿಕಿ ಮಿನಾಜ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ನಿಕಿ ಮಿನಾಜ್ ಎಂದಿದ್ದ ತಮ್ಮ ಹೆಸರನ್ನು ಮಿಸೆಸ್ ಪೆಟ್ಟಿ ಎಂದು ಬದಲಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.  ಈಗಾಗಲೇ ಕೆನ್ನೆಟ್ ಪೆಟ್ಟಿಯವರೊಂದಿಗೆ ಎಂಗೇಜ್ ಆಗಿರುವ ನಿಕಿ ರಹಸ್ಯವಾಗಿ ಮದುವೆಯೂ ಆಗಿರಬಹುದೆಂಬ ಡೌಟು ಹಾಲಿವುಡ್ ಮಂದಿಯಲ್ಲಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿಕಿ, ನಾನು ಮತ್ತು ಪೆಟ್ಟಿ ಜೊತೆಯಾಗಿ ಮ್ಯಾರೇಜ್‌ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಅದಕ್ಕೆ ಇನ್ನೂ ಸಮಯವಿದೆ. ಆದರೆ ನಾನು ಸದಾ ಟ್ರಾವೆಲ್‌ ಮಾಡುವ ಕಾರಣ ಈ ಲೈಸನ್ಸನ್ನು ಸದಾ ರಿನೀವಲ್‌ ಮಾಡಬೇಕಾಗುತ್ತದೆ. ಇದಕ್ಕೆ ಇನ್ನಷ್ಟು ವಾರಗಳು ಬೇಕಾಗುತ್ತವೆ. ಸುಮಾರು 80 ದಿನಗಳ ನಂತರ ನಮ್ಮ ಮದುವೆ ನಡೆಯಲಿದೆ ಎಂದಿದ್ದಾರೆ. ಸದ್ಯಕ್ಕೆ ತಾವಿಬ್ಬರು ಸರಳವಾಗಿ ಮದುವೆಯಾಗುತ್ತೇವೆ. ನಮ್ಮಿಬ್ಬರ ವೃತ್ತಿಗೆ ಸಂಬಂಧಿಸಿದ ಕೆಲಸಗಳು ಮುಗಿದ ಮೇಲೆ ಅದ್ಧೂರಿಯಾಗಿ ಮದುವೆಯಾಗಲು ನಿರ್ಧರಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top