200 ಕೆ.ಜಿ. ಭಾರವೆತ್ತಿದ ಟೈಗರ್ ಶ್ರಾಫ್!

Picture of Cinibuzz

Cinibuzz

Bureau Report

ಫಿಟ್ ನೆಸ್ ನಿಂದಾಗಿಯೇ ಸದಾ ಸುದ್ದಿಯಲ್ಲಿರುವ ನಟ ಟೈಗರ್ ಶ್ರಾಫ್ ಇತ್ತೀಚಿಗೆ ಜಿಮ್ ನಲ್ಲಿ ಬರೋಬ್ಬರಿ 200 ಕೆ.ಜಿ ಭಾರವೆತ್ತುವ ಮೂಲಕ ನೆರೆದಿದ್ದವರನ್ನು ಬೆರಗುಗೊಳಿಸಿದ್ದಾರೆ. ಈ ಕುರಿತ ವಿಡಿಯೋ ಮತ್ತು ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಅವರು, ಆಗಾಗ ಈ ರೀತಿ ಮಾಡುತ್ತೇನೆ. ಹೀಗೆ ಮಾಡಿದಾಗ ತುಂಬಾ ಹಗುರವಾದಂತೆ ಭಾಸವಾಗುತ್ತದೆ” ಎಂದು ಬರೆದುಕೊಂಡಿದ್ದಾರೆ.

https://www.instagram.com/p/B1SyIcvnrdz/?utm_source=ig_web_copy_link

ಈ ವಿಡಿಯೋ ಮತ್ತು ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಭಾರ ಎತ್ತುವ ವಿಡಿಯೋ ಆಗಲೇ 52,000 ವೀಕ್ಷಣೆಗೆ ಒಳಪಟ್ಟಿದೆ. ಇದಕ್ಕೆ ಕಾಮೆಂಟ್‌ ಮಾಡಿರುವ ಯುವ ನಟ ಮತ್ತು ಟೈಗರ್‌ ಕಟ್ಟಾ ಅಭಿಮಾನಿ ಇಶಾನ್‌ ಖಟ್ಟರ್‌ ಅವರು, ಸೂಪರ್‌ ಹ್ಯೂಮನ್‌ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top