ಪಾಕಿಸ್ತಾನದ ಸೇನೆಯ ವಿರುದ್ಧ ಗುಡುಗಿದ ಅದ್ನಾನ್ ಸಮಿ!

Picture of Cinibuzz

Cinibuzz

Bureau Report

ಭಯೋತ್ಪಾದನೆ ಮತ್ತು ಪಾಕಿಸ್ತಾನ ಸೇನೆಯ ವಿರುದ್ಧ ಗಾಯಕ ಅದ್ನಾನ್ ಸಮಿ ಗುಡುಗಿದ್ದು, “ಅಸಹಾಯಕ, ದಾರಿ ತಪ್ಪಿದ ಮತ್ತು ಖಿನ್ನತೆಗೆ ಒಳಗಾದ ಸೇನೆ” ಎಂದು ಪಾಕಿಸ್ತಾನ ಸೇನೆಯ ವಿರುದ್ಧ ಇತ್ತೀಚೆಗೆ ಕಿಡಿಕಾರಿ ಸುದ್ದಿಯಾಗಿದ್ದಾರೆ. ಅಲ್ಲದೇ ‘ಪಾಕ್‌ ಸೇನೆಯನ್ನು ನಾನು ದ್ವೇಷಿಸುತ್ತೇನೆ. ಏಕೆಂದರೆ ಅದು ಸದಾ ಯುದ್ಧೋತ್ಸಾಹಿ ಮತ್ತು ರಕ್ತಪಿಪಾಸು.

ಅಲ್ಲಿಯ ಸೇನೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು, ನಾಗರಿಕರ ಮನಃಸ್ಥಿತಿಯನ್ನೂ ಬದಲಿಸಿದೆ” ಎಂದು ಸಮಿ ಹರಿಹಾಯ್ದಿದ್ದಾರೆ. ಆದರೆ, ನಾನು ಪಾಕಿಸ್ತಾನ ನಾಗರಿಕರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಅವರು ಕೂಡ ಅಷ್ಟೇ. ನನ್ನ ಮೇಲೆ ಪ್ರಾಣ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟನ್‌ನಲ್ಲಿ ಹುಟ್ಟಿದ ಪಾಕಿಸ್ತಾನ ಮೂಲದ ಅದ್ನಾನ್‌ ಸಮಿ ಕೆನಡಾದ ಪೌರತ್ವ ಹೊಂದಿದ್ದರು. 2016ರಲ್ಲಿ ಭಾರತದ ಪೌರತ್ವ ಪಡೆದಿದ್ದಾರೆ.

ಇನ್ನಷ್ಟು ಓದಿರಿ

Scroll to Top