ರಾಕಿ ಬಾಯ್ ರಿಲೀಸ್ ಮಾಡಲಿದ್ದಾರೆ ಕಿಸ್ ಟ್ರೇಲರ್!

Picture of Cinibuzz

Cinibuzz

Bureau Report

ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿರುವ ಹೊಸಬರ ಸಿನಿಮಾ ಕಿಸ್. ಈಗಾಗಲೇ ಟೈಟಲ್, ಟ್ರೇಲರ್, ಹಾಡುಗಳ ಮೂಲಕ ಸಾಕಷ್ಟು ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಮಾಡಿರುವ ಕಿಸ್ ಚಿತ್ರದ ಟ್ರೇಲರನ್ನು ಇದೇ ತಿಂಗಳ 23ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ವಿಶೇಷವೆಂದರೆ ಈ ಟ್ರೇಲರನ್ನು ರಾಕಿ ಬಾಯ್ ರಿಲೀಸ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಪೋಸ್ಟರ್ ಒಂದನ್ನು ರಿಲೀಸ್ ಮಾಡಿಕೊಂಡಿದೆ.

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ. ರವಿಕುಮಾರ್ ಕಿಸ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ದಾಖಲೆಯ ವ್ಯೂಸ್ ಗಳನ್ನು ಪಡೆದುಕೊಂಡಿದೆ.

ಇನ್ನಷ್ಟು ಓದಿರಿ

Scroll to Top