ಪ್ರಿಯಾಂಕ ಪರ ನಿಂತ ವಿಶ್ವಸಂಸ್ಥೆ!

Picture of Cinibuzz

Cinibuzz

Bureau Report

ಕಾಶ್ಮಿರದ ವಿಚಾರದಲ್ಲಿ ಭಾರತದ ಸರ್ಕಾರದ ನಿಲುವಿನ ಪರವಾಗಿ ನಿಂತ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಯುನಿಸೆಫ್ ಗುಡ್ ವಿಲ್ ರಾಯಭಾರಿ ಹುದ್ದೆಯಿಂದ ವಜಾಗೊಳಿಸಬೇಕು ಎನ್ನುವ ಪಾಕಿಸ್ತಾನದ ಆಗ್ರಹವನ್ನು ವಿಶ್ವಸಂಸ್ಥೆ ಪರೋಕ್ಷವಾಗಿ ತಿರಸ್ಕರಿಸಿದೆ.

‘ಪ್ರಿಯಾಂಕಾ ಅಥವಾ ಇನ್ಯಾವ ಗುಡ್‌ವಿಲ್‌ ರಾಯಭಾರಿಯೇ ಆಗಿರಲಿ, ಯುನಿಸೆಫ್‌ ಅಥವಾ ಇನ್ಯಾವುದೇ ಸಂಸ್ಥೆಯ ಪರವಾಗಿ ಮಾತನಾಡುವಾಗ ನಿಷ್ಪಕ್ಷಪಾತವಾದ ನಿಲುವು ತೆಗೆದುಕೊಳ್ಳಬೇಕು. ಆದರೆ ವೈಯಕ್ತಿಕವಾಗಿ ಅವರ ಆಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ’ ಎಂದು ವಿಶ್ವಸಂಸ್ಥೆ ಪ್ರಿಯಾಂಕ ಪರ ಬ್ಯಾಟಿಂಗ್ ಮಾಡಿದೆ.

ಇನ್ನಷ್ಟು ಓದಿರಿ

Scroll to Top