ಮರುಬಿಡುಗಡೆಯಾಗಲಿದೆ ನಿಷ್ಕರ್ಷ!

Picture of Cinibuzz

Cinibuzz

Bureau Report

ಈಗೀಗ ಸ್ಯಾಂಡಲ್ ವುಡ್ ನಲ್ಲಿ ಈ ಹಿಂದೆ ರಿಲೀಸ್ ಆಗಿ ಸೂಪರ್ ಹಿಟ್ ಆದ ಜಮಾನದ ಸಿನಿಮಾಗಳನ್ನು ಮರುಬಿಡುಗಡೆ ಮಾಡುವ ಟ್ರೆಂಡ್ ಶುರುವಾಗಿದೆ. ಸಾಕಷ್ಟು ಸಿನಿಮಾಗಳನ್ನು ರಿಲೀಸ್ ಮಾಡಿರುವ ಚಿತ್ರತಂಡಗಳು ಸದ್ಯ 1993ರಲ್ಲಿ ಸುನೀಲ್​ ಕುಮಾರ್​ ದೇಸಾಯಿ ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾ ‘ನಿಷ್ಕರ್ಷ’ ವನ್ನು ಬಿಡುಗಡೆ ಮಾಡಲು ರೆಡಿಯಾಗಿದೆ.

ಸೃಷ್ಠಿ ಫಿಲಂಸ್ ನಿರ್ಮಾಣದಡಿಯಲ್ಲಿ ತಯಾರಾದ ಈ ಸಿನೆಮಾದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್​​ ನಾಯಕ ನಟನಾಗಿ ಅಭಿನಯಿಸಿದ್ದರು. ಒಂದೇ ಲೊಕೇಶನ್​ನಲ್ಲಿ ಚಿತ್ರಿತಗೊಂಡ ಈ ಕನ್ನಡದ ಸಿನಿಮಾ ಇಡೀ ದೇಶ ಬಾರಿ ಸದ್ದು ಮಾಡಿತ್ತು. ಇನ್ನು ಈ ಚಿತ್ರಕ್ಕೆ 3 ರಾಜ್ಯ ಪ್ರಶಸ್ತಿಗಳು ಸಂದಿದ್ದವು. ಇದೀಗ ಈ ಸಿನಿಮಾ ಮತ್ತೊಮ್ಮೆ ಕಮಾಲ್​ ಮಾಡಲು ಬರುತ್ತಿದ್ದು,  ಡಾ. ವಿಷ್ಣುವರ್ಧನ್ ನಟನೆಯ ನಾಗರ ಹಾವು ಸಿನಿಮಾ ಡಿಜಿಟಲ್​ ಅವತಾರ ಪಡೆದು ರಿಲೀಸ್​ ಆಗಿ ಹೊಸ ಇತಿಹಾಸ ಬರೆದ ಬೆನ್ನಲ್ಲೇ ಮತ್ತೊಮ್ಮೆ ದಾದಾ ಅವರ ಸಿಸಿಮಾ ಇತಿಹಾಸ ಬರೆಯಲು ಸಿದ್ಧವಾಗಿದೆ. ಸೆಪ್ಟೆಂಬರ್ 20 ರಂದು ನಿಷ್ಕರ್ಷ ಸಿನಿಮಾ ರಾಜ್ಯದಾದ್ಯಂತ ಮತ್ತೊಮ್ಮೆ ಬಿಡುಗಡೆಯಾಗಲಿದೆ. ನಿಷ್ಕರ್ಷ ತಾರಾಗಣದಲ್ಲಿ ಅನಂತ್​ನಾಗ್​, ಬಿ.ಸಿ ಪಾಟೀಲ್​, ರಮೇಶ್​ ಭಟ್​, ಅಂಜನಾ, ಅವಿನಾಶ್​, ಪ್ರಕಾಶ್​ ರೈ, ಸುಮನ್​ ನಗರಕರ್​ ಅಭಿನಯಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top