ನನ್ನ ಆಸ್ತಿಯಲ್ಲಿ ಮಗನಿಗೆ ಎಷ್ಟು ಪಾಲಿದೆಯೋ ಅಷ್ಟೇ ಪಾಲು ಮಗಳಿಗೂ ಇದೆ: ಬಚ್ಚನ್

Picture of Cinibuzz

Cinibuzz

Bureau Report

ಬಾಲಿವುಡ್ ನ ಎವರ್ ಗ್ರೀನ್ ನಟ ಅಮಿತಾಬ್ ಬಚ್ಚನ್ ವೃತ್ತಿ ಜೀವನದಲ್ಲಿ ಸಂಪಾದಿಸಿರುವ ತಮ್ಮ ಗಳಿಕೆಯ ಆಸ್ತಿಯನ್ನು ಮಕ್ಕಳಿಗೆ ಪಾಲು ಮಾಡಿದ್ದಾರೆ. ಅಲ್ಲದೇ ನನ್ನ ಆಸ್ತಿಯಲ್ಲಿ ಮಗ ಅಭಿಷೇಕ್ ಬಚ್ಚನ್ ಗೆ ಎಷ್ಟು ಪಾಲಿದೆಯೋ ಅಷ್ಟೆ ಪಾಲು ಮಗಳು ಶ್ವೇತಾಗೂ ಇದೆ ಎಂದು ಹೇಳಿದ್ದಾರೆ. ತಮ್ಮ ಆಸ್ತಿಯ ವಿಲ್ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅಮಿತಾಬ್ ಬಚ್ಚನ್ ಅಭಿಷೇಕ್​ ಬಚ್ಚನ್​ ಒಬ್ಬನೇ ನನ್ನ ಆಸ್ತಿಯ ವಾರಸುದಾರನಲ್ಲ, ನನ್ನ ಮಗಳಿಗೂ ನನ್ನ ಆಸ್ತಿಯಲ್ಲಿ ಸಮಾನ ಪಾಲು ಸಿಗಲಿದೆ ಎಂದಿದ್ದಾರೆ.

ತಮ್ಮ ಪಾಲಿನ ಆಸ್ತಿಯನ್ನು ಅಭಿಷೇಕ್​ ಬಚ್ಚನ್​ ಹಾಗೂ ಮಗಳು ಶ್ವೇತಾ ನಡುವೆ ಸಮಾನವಾಗಿ ಹಂಚಲು ನಿರ್ಧರಿಸಿರುವ ಅವರು ಇತ್ತೀಚೆಗೆ ಶ್ವೇತಾ ಬರೆದ ಮೊದಲ ಕಾದಂಬರಿ ‘ಪ್ಯಾರಡೈಸ್​ ಟವರ್ಸ್’ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಮಗಳ ಸಾಧನೆಗೆ ಮನಸೋತಿರುವ ಬಚ್ಚನ್ ಮಗಳ ಬಾಲ್ಯದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top