ಸೈಲೆಂಟಾಗಿ ಶೂಟಿಂಗ್‌ ಶುರು ಮಾಡಿದರು ಸತ್ಯಹೆಗ್ಡೆ!

Picture of Cinibuzz

Cinibuzz

Bureau Report

ಎಲ್ಲರೂ ನಿಯಮಕ್ಕೆ ಬದ್ಧರಾಗಿ ಕೈಕಟ್ಟಿ ಕುಳಿತಿರುವಾಗ ತಾವು ಮಾತ್ರ  ಆತುರಕ್ಕೆ ಬಿದ್ದು ಕೆಲಸ ಶುರುವಿಟ್ಟುಕೊಂಡರೆ ಹೇಗೆ?  ಸತ್ಯ ಹೆಗಡೆ ತಮ್ಮ ತಂಡದೊಂದಿಗೆ ಶೂಟಿಂಗ್‌ ಆರಂಭಿಸಿದ್ದಾರೆ. ಅದೂ ಎಲ್ಲಿ ಅಂತೀರಾ? ಇನೋವೇಟೀವ್‌ ಫಿಲ್ಮ್‌ ಸಿಟಿಯಲ್ಲಿ!

ಯಾರಿಗಿಲ್ಲ ಸಮಸ್ಯೆ? ಕೋಟಿ ಕೋಟಿ ಹಣ ಸುರಿದು ನಿರ್ಮಿಸಿದ ಸಿನಿಮಾಗಳನ್ನು ಬಿಡುಗಡೆ ಮಾಡಲಾರದೇ ನಿರ್ಮಾಪಕ, ನಿರ್ದೇಶಕರು ಮಿಸುಕಾಡುತ್ತಿದ್ದಾರೆ. ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ತಿಂಗಳುಗಳಿಂದ ಬಣ್ಣ ಕಾಣದೇ ಕಲಾವಿದರ ಮುಖಗಳು ಒಣಗಿಹೋಗಿವೆ. ಕೊರೋನಾ ವೈರಸ್ಸು ಪ್ರತಿಯೊಬ್ಬರ ಕನಸನ್ನೂ ಕುಂತಲ್ಲೇ ಕಮರಿಸಿದೆ. ಜನರ ಜೀವಕ್ಕಾಗಿ ಸರ್ಕಾರ ಏನೆಲ್ಲಾ ರೂಲ್ಸು ರಚಿಸಿ ಹೆಣಗಾಡುತ್ತಿದೆ. ಕಿರುತೆರೆಯವರಿಗೆ ಮನೆಯೊಳಗೇ ಶೂಟಿಂಗ್‌ ಮಾಡ್ಕಳಿ ಹೊರಗೆ ಬರಬೇಡಿ ಅಂತಾ ಹೇಳಿ, ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನಷ್ಟೇ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಸರ್ಕಾರದ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಇಲ್ಲೊಂದು ಟೀಮು ತಮ್ಮ ಪಾಡಿಗೆ ತಾವು ಶೂಟಿಂಗ್‌ ಆರಂಭಿಸಿರುವ ಸುದ್ದಿಯೊಂದು ಬಿಡದಿಯಿಂದ ಒದ್ದುಕೊಂಡು ಬಂದಿದೆ!

ಕನ್ನಡ ಚಿತ್ರರಂಗದ ಕ್ರಿಯಾಶೀಲ ಛಾಯಾಗ್ರಾಹಕ ಅಂತಾ ಹೆಸರು ಮಾಡಿರುವವರು ಸತ್ಯ ಹೆಗಡೆ. ಈಗೀಗ ತಮ್ಮದೇ ಯೂನಿಟ್ಟು, ಕ್ಯಾಮೆರಾ ಸಲಕರಣೆಗಳನ್ನೆಲ್ಲಾ ಬಾಡಿಗೆಗೆ ಕೊಡುವ, ಪ್ಯಾಕೇಜು ಪಡೆಯುವ ಕಾಯಕವನ್ನೂ ಆರಂಭಿಸಿದ್ದಾರೆ. ಇರಲಿ, ತುರ್ತು ನಿಬಂಧನೆಗಳೆಲ್ಲಾ ತೆರವಾದಮೇಲೆ ಎಲ್ಲ ವಹಿವಾಟನ್ನೂ ಮುಂದುವರೆಸಿಕೊಳ್ಳಲಿ. ಎಲ್ಲರೂ ನಿಯಮಕ್ಕೆ ಬದ್ಧರಾಗಿ ಕೈಕಟ್ಟಿ ಕುಳಿತಿರುವಾಗ ತಾವು ಮಾತ್ರ  ಆತುರಕ್ಕೆ ಬಿದ್ದು ಕೆಲಸ ಶುರುವಿಟ್ಟುಕೊಂಡರೆ ಹೇಗೆ?  ಸತ್ಯ ಹೆಗಡೆ ತಮ್ಮ ತಂಡದೊಂದಿಗೆ ಶೂಟಿಂಗ್‌ ಆರಂಭಿಸಿದ್ದಾರೆ. ಅದೂ ಎಲ್ಲಿ ಅಂತೀರಾ? ಇನೋವೇಟೀವ್‌ ಫಿಲ್ಮ್‌ ಸಿಟಿಯಲ್ಲಿ!

ಮನೆಯೊಗಳಗಿದ್ದೇ ಶೂಟಿಂಗೋ ಮತ್ತೊಂದೋ ಮಾಡಿಕೊಂಡಿದ್ದರೆ ಬಹುಶಃ ಯಾರೂ ಪ್ರಶ್ನಿಸುತ್ತಿರಲಿಲ್ಲ. ಇನೋವೇಟೀವ್‌ ಫಿಲ್ಮ್‌ ಸಿಟಿಯಂಥಾ ಜಾಗದಲ್ಲಿ ಸತ್ಯಾ ಹೆಗಡೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ, ಅದಕ್ಕೆ ಆ ಸ್ಟುಡಿಯೋದ ಮುಖ್ಯಸ್ಥರು ಅನುಮತಿಯನ್ನೂ ನೀಡುತ್ತಾರೆಂದರೆ ಹೇಗೆ? ಜಗತ್ತಿಗೊಂದು ನ್ಯಾಯವಾದರೆ ಇವರಿಗೊಂದು ರೂಲ್ಸಾ?

ಇನ್ನಷ್ಟು ಓದಿರಿ

Scroll to Top