ಐದು ಭಾಷೆಗಳಲ್ಲಿ ಡಿ ಕಂಪನಿ!

Picture of Cinibuzz

Cinibuzz

Bureau Report

ಸದ್ಯ ಎಲ್ಲ ಭಾಷೆಗಳ ಟೀಸರ್ ಬಿಡುಗಡೆ ಆಗಿದ್ದು, ಶೀಘ್ರದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ತಂಡ ಘೋಷಿಸಿಕೊಳ್ಳಲಿದೆ. ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ ಆರ್​ಜಿವಿ.

ಭೂಗತ ಲೋಕದ ಕಥೆಯನ್ನು ತೆರೆಮೇಲೆ ತೋರಿಸುವುದರಲ್ಲಿ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ನಿಸ್ಸೀಮರು. ಈಗಾಗಲೇ ಅವರ ಬತ್ತಳಿಕೆಯಿಂದ ಅಂತ ಸಾಕಷ್ಟು ಪ್ರಯತ್ನಗಳಾಗಿವೆ. ಅವೆಲ್ಲವೂ ಈಗಾಗಲೇ ಒಂದೊಂದು ದಾಖಲೆ ಬರೆದಿವೆ. ಇದೀಗ ಡಿ ಕಂಪನಿ ಮೂಲಕ ಮತ್ತೆ ಭೂಗತ ಲೋಕವನ್ನು ಅನಾವರಣ ಮಾಡುತ್ತಿದ್ದಾರೆ. ಅದರಂತೆ ಶನಿವಾರ ಡಿ ಕಂಪನಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸ್ವತಃ ಆರ್​ಜಿವಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಲಿಂಕ್​ ಶೇರ್ ಮಾಡಿದ್ದು, ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ.

ಭೂಗತ ಪಾತಕಿ ದಾವುದ್​ ಇಬ್ರಾಹಿಂ ಬಯೋಪಿಕ್​ ನಿರ್ದೇಶನ ಮಾಡಿದ್ದಾರೆ ರಾಮ್​ಗೋಪಾಲ್ ವರ್ಮಾ. ಈ ಮೊದಲು 2002ರಲ್ಲಿ ಕಂಪನಿ ಸಿನಿಮಾ ನಿರ್ಮಾಣ ಮಾಡಿದ್ದ ಆರ್​ಜಿವಿ ಇದೀಗ ಡಿ ಕಂಪನಿ ಮೂಲಕ ರಾಜಕೀಯ, ಕ್ರೈಂ ಮತ್ತು ಪಾತಕ ಲೋಕದ ಎಳೆಯನ್ನು ಬಿಚ್ಚಿಟ್ಟಿದ್ದಾರೆ. ಈ ಮೊದಲಿನ ಕಂಪನಿಯಲ್ಲಿ ದಾವುದ್ ಇಬ್ರಾಹಿಂ ಮತ್ತು ಚೋಟಾ ರಾಜನ್ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದೀಗ ಸಿದ್ಧವಾಗಿರುವ ಡಿ ಕಂಪನಿಯಲ್ಲಿ ನೇರವಾಗಿ ಕರಾಚಿಯ ಕಥೆ ತೆರೆದುಕೊಳ್ಳಲಿದೆ.

ಈಗಾಗಲೇ ಫಸ್ಟ್ ಲುಕ್​ ಮೂಲಕ ಸಾಕಷ್ಟು ಸದ್ದು ಮಾಡಿರುವ ಡಿ ಕಂಪನಿ ಸಿನಿಮಾ ಇದೀಗ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಂಡಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರದಲ್ಲಿಯೇ ಈ ಸಿನಿಮಾ ಬಿಡುಗಡೆ ಆಗಲಿದೆ. ಸದ್ಯ ಎಲ್ಲ ಭಾಷೆಗಳ ಟೀಸರ್ ಬಿಡುಗಡೆ ಆಗಿದ್ದು, ಶೀಘ್ರದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ತಂಡ ಘೋಷಿಸಿಕೊಳ್ಳಲಿದೆ. ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ ಆರ್​ಜಿವಿ. ಸ್ಪಾರ್ಕ್​ ಪ್ರೊಡಕ್ಷನ್ ಸಂಸ್ಥೆಯ ಸಾಗರ್ ಪ್ರಸಾದ್ ಮಚನೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top