ಡಿಸೆಂಬರ್ 5ಕ್ಕೆ ಯುವನ್ ಶಂಕರ್ ರಾಜಾ ಹಂಗಾಮ!

Picture of Cinibuzz

Cinibuzz

Bureau Report

ಹೊಸ ವರ್ಷದ ಸ್ವಾಗತಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಂತೆ, ನವಜೋಶಿಯ ಸಂಭ್ರಮಕ್ಕೆ ಸಾಕ್ಷಿಯಾಗಲು ಗಾರ್ಡನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ. ವರ್ಷಾಂತ್ಯದ ಈ ಕಡೇ ಕ್ಷಣಗಳನ್ನು ಮತ್ತಷ್ಟು ಮಾಧುರ್ಯಪೂರ್ಣ ಹಾಗೂ ಸ್ಮರಣೀಯವಾಗಿಸಲು ಬೃಹತ್ ಸಂಗೀತ ಕಾರ್ಯಕ್ರಮವೊಂದು ಮೈೆವೆತ್ತಿಕೊಳ್ಳುತ್ತಿದೆ. ಈಗಾಗಲೇ ಸಾನ್ಸಹೀನವಾದ ಹತ್ತಾರು ವಿನೂತನ ಸಂಗೀತ ಮನರಂಜನಾ ಕೂಟಗಳ ಮೂಲಕ ಯುವ ಜನತೆಯ ಮನ ಸೆಳೆದಿರುವ ಬೆಂಗಳೂರು ಮೂಲದ ‘ನಾಯ್ಸ್ ಎಂಟರ್ಟೈನ್ಮೆಂಟ್’ ಸಂಸ್ಥೆಯು ಈಗ ‘U1niverse ಟೂರ್’ ಎಂಬ ವಿಶಿಷ್ಟ ಪರಿಕಲ್ಪನೆಯಡಿಯಲ್ಲಿ ಅದ್ಧೂರಿ ಸಂಗೀತ ಉತ್ಸವವನ್ನು ಹಮ್ಮಿಕೊಂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ, ಗೀತರಚನೆಕಾರ ಹಾಗೂ ಗಾಯಕ ಯುವನ್ ಶಂಕರ್ ರಾಜಾ ಅವರ ಸಮ್ಮೋಹನಗೊಳಿಸುವ ದನಿಯ ಜಾದೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದೆ.

ಈ ಭವ್ಯ ಕಾರ್ಯಕ್ರಮದ ಅಧಿಕೃತ ಮುನ್ನುಡಿಯಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಯುವನ್ ಶಂಕರ್ ರಾಜಾ ಸೇರಿದಂತೆ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಪ್ರಮುಖರು ಹಾಗೂ ಈ ಈವೆಂಟ್‌ನ ಸಹಭಾಗಿತ್ವ ಹೊಂದಿರುವ ‘ಸುಮನ್ ಟಿವಿ ಕನ್ನಡ’ದ ಮುಖ್ಯಸ್ಥರು ಒಟ್ಟಾಗಿ ಸೇರಿ ಕಾರ್ಯಕ್ರಮದ ಕುರಿತ ರೋಚಕ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಜನಪ್ರಿಯ ಸಂಗೀತ ಮಾಂತ್ರಿಕ ಯುವನ್ ಶಂಕರ್ ರಾಜಾ, ಬೆಂಗಳೂರು ನಗರದೊಂದಿಗಿನ ತಮ್ಮ ವಿಶೇಷ ನಂಟನ್ನು ನೆನಪಿಸಿಕೊಂಡು ಭಾವುಕರಾದರು. “ಬೆಂಗಳೂರು ನನ್ನ ಪಾಲಿಗೆ ಎಂದೆಂದಿಗೂ ಅತ್ಯಂತ ಪ್ರಿಯವಾದ ಊರು. ಇಲ್ಲಿ ನಡೆಯುತ್ತಿರುವ ಈ ಬೃಹತ್ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ಭಾಗವಹಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಈ ಸಂಗೀತ ಕಾರ್ಯಕ್ರಮವು ಸಂಪೂರ್ಣವಾಗಿ ವಿಭಿನ್ನವಾದ ನವೀನ ಸಂಗೀತ ಸಂಯೋಜನೆಗಳು, ಕಣ್ಣಿಗೆ ಕಟ್ಟುವ ಅದ್ಭುತ ವೇದಿಕೆ, ಪ್ರತಿಭಾವಂತ ಗಾಯಕರು ಹಾಗೂ ಅತ್ಯುನ್ನತ ತಾಂತ್ರಿಕ ವರ್ಗದೊಂದಿಗೆ ಕಳೆಗಟ್ಟಿಕೊಳ್ಳಲಿದೆ. ಪ್ರೇಕ್ಷಕರಿಗೆ ಇದು ಮರೆಯಲಾಗದ ಅನುಭವವಾಗಲಿದೆ” ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (CFO) ಸುರೇಶ್ ಗೌಡ, “ನಮ್ಮದು ಸಂಪೂರ್ಣವಾಗಿ ಬೆಂಗಳೂರು ಮೂಲದ ಹೆಮ್ಮೆಯ ಸಂಸ್ಥೆಯಾಗಿದೆ. ಇದುವರೆಗೆ ನಮ್ಮ ಸಂಸ್ಥೆಯ ವತಿಯಿಂದ ವಿಜಯ್ ಪ್ರಕಾಶ್, ಶಾನ್, ರಾಜೇಶ್ ಕೃಷ್ಣನ್ ಮುಂತಾದ ದಿಗ್ಗಜ ಗಾಯಕರ ಲೈವ್ ಮ್ಯೂಸಿಕ್ ಕಾನ್ಸರ್ಟ್ಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದೇವೆ. ಈ ಸಾಲಿಗೆ ಈಗ ಯುವನ್ ಶಂಕರ್ ರಾಜಾ ಅವರ ಈವೆಂಟ್ ಸೇರ್ಪಡೆಯಾಗುತ್ತಿದೆ. ಡಿಸೆಂಬರ್ 5 ರಂದು ಬೆಂಗಳೂರಿನ ನೈಸ್ ಗ್ರೌಂಡ್‌ನಲ್ಲಿ ಈ ಬೃಹತ್ ಸಂಗೀತ ಹಬ್ಬ ಅದ್ಧೂರಿಯಾಗಿ ಜರುಗಲಿದೆ. ವಿಶೇಷವಾಗಿ ಸಂಗೀತ ಪ್ರೇಮಿಗಳು ಹಾಗೂ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೇವಲ 699 ರೂಪಾಯಿಗಳಿಂದ ಟಿಕೆಟ್ ದರ ಆರಂಭವಾಗಲಿದ್ದು, ಗರಿಷ್ಠ 3000 ರೂಪಾಯಿವರೆಗೆ ಇರಲಿದೆ” ಎಂದು ವಿವರಣೆ ನೀಡಿದರು.

ಇನ್ನು ಈ ಭವ್ಯ ಸಂಗೀತ ಉತ್ಸವಕ್ಕೆ ಕೈಜೋಡಿಸಿರುವ ಕುರಿತು ಮಾತನಾಡಿದ ‘ಸುಮನ್ ಟಿವಿ ಕನ್ನಡ’ದ ಮುಖ್ಯಸ್ಥರಾದ ಯುಗಂಧರ್ ಪೂಲಾ, “ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಈ ಅದ್ಭುತ ಮ್ಯೂಸಿಕ್ ಕಾನ್ಸರ್ಟ್‌ನ ಡಿಜಿಟಲ್ ಪಾರ್ಟ್ನರ್ ಆಗಿ ಸುಮನ್ ಟಿವಿ ಕನ್ನಡ ಹೆಮ್ಮೆಯಿಂದ ಸಾಥ್ ನೀಡಲಿದೆ. ಈ ಕಾರ್ಯಕ್ರಮದ ಮುಖ್ಯ ಸೆಲೆಬ್ರಿಟಿಯಾಗಿ ಸಂಗೀತ ಲೋಕದ ಹಿರಿಯ ನಾಯಕ ಯುವನ್ ಶಂಕರ್ ರಾಜಾ ಆಗಮಿಸಲಿದ್ದಾರೆ. ಅವರೊಂದಿಗೆ ಸ್ಯಾಂಡ್‌ವುಡ್ ಹಾಗೂ ಇ Aತರೆ ಚಿತ್ರರಂಗಗಳ ಹಲವಾರು ಖ್ಯಾತ ಸೆಲೆಬ್ರಿಟಿಗಳು ಹಾಗೂ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಲಿರುವ ವಿಶೇಷ ಅತಿಥಿಗಳ ಅಂತಿಮ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ” ಎಂದರು.

ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಮಾತನಾಡುತ್ತಾ, ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯು ಕೇವಲ ಮನರಂಜನೆ ಮಾತ್ರವಲ್ಲದೆ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಗೂ ಒತ್ತು ನೀಡುತ್ತಿರುವುದಾಗಿ ತಿಳಿಸಿತು. ಮುಂಬರುವ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಕನ್ನಡಿಗರಿಗಾಗಿ ಕನ್ನಡ ಹಬ್ಬದಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಾವುದೇ ಟಿಕೆಟ್ ಇಲ್ಲದೆ (ಟಿಕೆಟ್ ರಹಿತವಾಗಿ) ಸಂಪೂರ್ಣ ಉಚಿತವಾಗಿ ಆಯೋಜಿಸುವ ಚಿಂತನೆ ಇದೆ ಎಂಬ ಸಡಗರದ ಮಾಹಿತಿಯನ್ನು ಸುರೇಶ್ ಗೌಡ ಹಂಚಿಕೊಳ್ಳುವ ಮೂಲಕ ಸಂಗೀತ ರಸಿಕರಿಗೆ ದೊಡ್ಡ ಸಿಹಿಕುಡಿಯನ್ನು ನೀಡಿದರು.

ಡಿಸೆಂಬರ್ 5ರ ಆ ಇಂಪಾದ ಸಂಜೆಯಲ್ಲಿ ಇಡೀ ನೈಸ್ ಗ್ರೌಂಡ್ ಯುವನ್ ಶಂಕರ್ ರಾಜಾ ಅವರ ಗಾಯನದ ಅಲೆಗಳಲ್ಲಿ ತೇಲಾಡಲು ಈಗಿನಿಂದಲೇ ಕೌಂಟ್‌ಡೌನ್ ಶುರುವಾಗಿದೆ!

Bengaluru Gears Up for a Musical Extravaganza: Yuvan Shankar Raja’s ‘U1niverse’ Concert on December 5th!

With the countdown to the New Year already underway, the Garden City of Bengaluru is gearing up to witness an energetic celebration. To make these final moments of the year even more melodious and memorable, a mega musical concert is coming to life. Noise Entertainment, a Bengaluru-based organization that has captured the hearts of youth through numerous innovative musical entertainment gatherings, has now organized a grand music festival under the unique concept of the ‘U1niverse Tour’. The mesmerizing vocal magic of South India’s renowned music director, lyricist, and singer, Yuvan Shankar Raja, is all set to spellbound the audience.

As an official prelude to this grand event, a special press conference was recently held where Yuvan Shankar Raja, key figures from Noise Entertainment, and the heads of ‘Suman TV Kannada’—the event’s digital partner—gathered to share exciting details about the program with the media.

Speaking at the press conference, the popular musical wizard Yuvan Shankar Raja grew emotional as he recalled his special bond with Bengaluru:

“Bengaluru has always been a very special place to my heart. I am immensely happy to be a part of this massive music concert happening here. This musical event will be enriched with completely novel music compositions, a visually stunning stage, talented singers, and a top-notch technical crew. It is going to be an unforgettable experience for the audience.”

Suresh Gowda, the Chief Financial Officer (CFO) of Noise Entertainment, briefing about the outlines of the event, stated:

“Ours is a proud Bengaluru-based organization. So far, we have successfully organized live music concerts of legendary singers like Vijay Prakash, Shaan, and Rajesh Krishnan under our banner. Yuvan Shankar Raja’s event is now joining this prestigious list. This mega music festival will be held grandly on December 5th at the NICE Grounds in Bengaluru.”

ಇನ್ನಷ್ಟು ಓದಿರಿ

ಹೇಗಿದೆ ಸಿನಿಮಾ?

Scroll to Top