Unveiling a World of Love with the Song 'Andagatiye': 'Marriage Party' Hits the Big Screen on December 4th!

Marriage_Party

Picture of Cinibuzz

Cinibuzz

Bureau Report

ಕಡಲ ತಡಿಯ ಮಜವಾದ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವ ಚಯನ್ ಶೆಟ್ಟಿ ನಿರ್ದೇಶನದ ‘ಮ್ಯಾರೇಜ್ ಪಾರ್ಟಿ’ ಚಿತ್ರದ ಮತ್ತೊಂದು ಮಜಲು ಇದೀಗ ಅನಾವರಣಗೊಂಡಿದೆ. ಈಗಾಗಲೇ ‘ಗಲಾಟೆ’ ಸಾಂಗ್ ಮೂಲಕ ಸದ್ದು ಮಾಡಿದ್ದ ಚಿತ್ರತಂಡ, ಪ್ರೇಕ್ಷಕರ ಎದುರಿಗೆ ಪ್ರೀತಿಯ ನವಿರು ಭಾವಗಳಿಂದ ಮೈದುಂಬಿಕೊಂಡಿರುವ ‘ಅಂದಗಾತಿಯೇ’ ಲಿರಿಕಲ್ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಸಂತೋಷ್ ವಿ ಅವರು ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದ ಹಾಡುಗಳು ಒಂದೊಂದಾಗಿ ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿವೆ. ವಾರಗಳ ಹಿಂದೆ ಬಿಡುಗಡೆಗೊಂಡು ಸಖತ್ ಸದ್ದು ಮಾಡಿದ್ದ ‘ಗಲಾಟೆ’ ಹಾಡು ಚಿತ್ರದ ಒಂದು ಹದವಾದ ಭಾವವನ್ನು ಹಿಡಿದಿಟ್ಟುಕೊಂಡಿದ್ದರೆ, ಈಗ ಬಂದಿರುವ “ಮೊದಲಾ ಮಳೆಹನಿ ಎದೆಯೊಳಗಡೆ ಇಳಿದು…” ಎಂದು ಶುರುವಾಗುವ ‘ಅಂದಗಾತಿಯೇ’ ಗೀತೆಯು ಸಂಪೂರ್ಣವಾಗಿ ಪ್ರೇಮಕಥನದ ಸುಂದರ ಛಾಯೆಯನ್ನು ಜಾಹೀರುಗೊಳಿಸಿದೆ.

ಋತ್ವಿಕ್ ಮುರಳೀಧರ್ ಅವರ ಮೋಡಿಮಾಡುವ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಖ್ಯಾತ ಗಾಯಕರಾದ ಕಪಿಲ್ ಕಪಿಲನ್ ಮತ್ತು ಸುಮನ್ ನಾರಣ್ ಧ್ವನಿಯಾಗಿದ್ದಾರೆ. ಇನ್ನು ಪ್ರಮೋದ್ ಮರವಂತೆ ಅವರ ಸಾಹಿತ್ಯವು ಹಾಡಿನ ಸಾಲುಗಳಿಗೆ ಇನ್ನಷ್ಟು ಮೆರುಗು ತಂದುಕೊಟ್ಟಿದೆ. ನಿರ್ದೇಶಕರು ಈಗಾಗಲೇ ಸಿನಿಮಾದ ಕಥಾ ಹಂದರದಲ್ಲಿರುವ ಹತ್ತು ಹಲವು ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದು, ಕಡಲ ತಡಿಯ ಈ ಕಥೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಕಲಾಕೃತಿಯ ತಾಂತ್ರಿಕ ಬಳಗವೂ ಬಲವಾಗಿದೆ. ಶ್ರೀಕಾಂತ್ ಅವರ ಕ್ಯಾಮೆರಾ ಕೈಚಳಕದ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಅವರ ಕರಕುಶಲ ಸಂಕಲನ ಹಾಗೂ ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಅವರ ಅರ್ಥಪೂರ್ಣ ಸಾಹಿತ್ಯ ಚಿತ್ರಕ್ಕಿದೆ. ಇನ್ನು ತಾರಾಗಣದಲ್ಲಿ ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್ ಮತ್ತು ಭೀಮ್ ರಾವ್ ವಾಸ್ಟರ್ ಮುಂತಾದ ದಿಗ್ಗಜರ ಕಲಾವಿದರ ದೊಡ್ಡ ತಂಡವೇ ಅಭಿನಯಿಸಿದೆ.

ಮನತುಂಬುವ ಹಾಡುಗಳು, ಭರವಸೆಯ ತಾರಾಗಣ ಹಾಗೂ ಕಡಲ ತಡಿಯ ಹೊಸ ಅನುಭವವನ್ನು ನೀಡಲು ಹೊರಟಿರುವ ‘ಮ್ಯಾರೇಜ್ ಪಾರ್ಟಿ’ ಸಿನಿಮಾವು ಕೇವಲ ಕನ್ನಡ ಮಾತ್ರವಲ್ಲದೆ ಮಲೆಯಾಳಂ ಭಾಷೆಯಲ್ಲೂ ತೆರೆಕಾಣಲಿದೆ. ನಿಮ್ಮೆಲ್ಲರ ನಿರೀಕ್ಷೆಯನ್ನು ಹೆಚ್ಚಿಸಲು ಇದೇ ಬರುವ ಡಿಸೆಂಬರ್ 4ರಂದು ಈ ಚಿತ್ರವು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ತೆರೆಗಾಣಲಿದೆ. ತಪ್ಪದೇ ವೀಕ್ಷಿಸಿ ಆನಂದಿಸಿ!

Unveiling a World of Love with the Song ‘Andagatiye’: ‘Marriage Party’ Hits the Big Screen on December 4th!

Steeped in a fun-filled coastal tale, Chayan Shetty’s directorial venture **’Marriage Party’** has revealed yet another mesmerizing facet of its cinematic journey. Having already created a massive buzz with their peppy track **’Galate’**, the film’s team has now delighted audiences by releasing the lyric video of **’Andagatiye’**, a soulful melody brimming with the tender emotions of love.

Produced by Santosh V under the banner of Sri Varahi Films, the tracks from this movie are steadily doubling the anticipation surrounding the project. While the previously released ‘Galate’ captured a distinct, playful vibe of the film, the new track—beginning with the lyrical lines *”Modala Malehani Edeyolagade Ilidu…”* (The first raindrop sinking deep into the heart)—vividly showcases the beautiful backdrop of a romantic narrative.

Composed by the talented Ritwik Muralidhar, the song features captivating vocals by renowned playback singers Kapil Kapilhan and Suman Narayan, further enhanced by the poetic and meaningful lyrics penned by Pramod Maravante. The director has previously shared insights into the core plot of ‘Marriage Party’, and it is evident that this coastal drama promises wholesome entertainment for audiences everywhere.

The film boasts a robust technical crew. It features cinematography by Srikanth, music by Ritwik Muralidhar, editing by Nitin Shetty (of *Zoo From So* fame), and lyrics by Pramod Maravante and Trilok Trivikrama. The stellar star cast includes Vineeth Kumar, Prakash Tuminad, Deepak Rai, Naveen D. Padil, Rakshitha, Namitha Kiran, Ramdas, Raghu Pandeshwar, Pushparaj Bolar, Jyothi Shetty, Radhakrishna, P.D. Satish, and Bheem Rao Vaster, among many others.

With soul-stirring music, a promising ensemble cast, and a fresh coastal setting, ‘Marriage Party’ is gearing up for a bilingual release in both Kannada and Malayalam. To heighten your excitement, the film is scheduled for a grand theatrical release across the state on **December 4th**. Don’t miss it!

ಇನ್ನಷ್ಟು ಓದಿರಿ

ಹೇಗಿದೆ ಸಿನಿಮಾ?

Scroll to Top