ಗಿರ್ ಗಿಟ್ಲೆ ಹಾಡಿಗೆ ಧ್ವನಿಯಾಗಲಿದ್ದಾರೆ ನವೀನ್ ಸಜ್ಜು!

Picture of Cinibuzz

Cinibuzz

Bureau Report

ರವಿಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದೀಗ ಇದರ ಸ್ಪೆಷಲ್ ಸಾಂಗ್ ಒಂದನ್ನು ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಹಾಡಲಿದ್ದಾರೆ. ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಗೆ ಸಂಪೂರ್ಣ ತಯಾರಿಯನ್ನೂ ಮಾಡಿಕೊಳ್ಳಲಾಗಿದೆ.

ನಿರ್ದೇಶಕ ರವಿಕಿರಣ್ ಅವರೇ ಬರೆದಿರುವ ಹಾಡಿಗೆ ಲಿಯೋ ಪೀಟರ‍್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ವಿಶೇಷವಾದ ಹಾಡಿಗೆ ನವೀನ್ ಸಜ್ಜು ಧ್ವನಿಯಾಗಲಿದ್ದಾರೆ. ನವೀನ್ ಸಜ್ಜು ಹಾಡಿರೋ ಹಾಡುಗಳೆಲ್ಲವೂ ಸೂಪರ್ ಹಿಟ್ಟಾಗಿವೆ. ತನ್ನ ಅತ್ಯಂತ ವಿರಳವಾದ ಧ್ವನಿ, ಶೈಲಿಯ ಕಾರಣದಿಂದಲೇ ಬಹು ಬೇಡಿಕೆ ಪಡೆದುಕೊಂಡಿರೋ ನವೀನ್ ಸಜ್ಜು ಬಿಗ್ ಬಾಸ್ ಶೋ ನಂತರದಲ್ಲಿ ಈ ಹಾಡನ್ನು ಹಾಡುತ್ತಿದ್ದಾರೆ. ಇದೂ ಕೂಡಾ ಅವರ ಹಿಟ್ ಲಿಸ್ಟಿಗೆ ಸೇರಿಕೊಳ್ಳೋ ಸೂಚನೆಗಳಿವೆ. ಮತ್ತೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ

ಗಿರಗಿಟ್ಲೆ ಪಕ್ಕಾ ಆಕ್ಷನ್ ಕಥಾ ಹಂದರ ಹೊಂದಿರೋ ಕಮರ್ಶಿಯಲ್ ಚಿತ್ರ. ಈ ಚಿತ್ರದ ಮೂಲಕ ಪ್ರದೀಪ್, ಗುರು ಮತ್ತು ಚಂದ್ರು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಸನ್ನಿಧಿ ಎಂದೇ ಖ್ಯಾತರಾಗಿರೋ ವೈಷ್ಣವಿ ಗೌಡ ಮತ್ತು ಅದ್ವಿತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಹೀರೋ ಹೀರೋಯಿನ್ ಎಂಬ ಚೌಕಟ್ಟು ಮೀರಿದ ಕಥೆ ಹೊಂದಿರೋ ಈ ಚಿತ್ರದಲ್ಲಿ ರಂಗಾಯಣ ರಘು ಬಲು ವಿಶಿಷ್ಟವಾದೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ

#

ಇನ್ನಷ್ಟು ಓದಿರಿ

Scroll to Top