ಫಾರಿನ್ ಹುಡುಗನ ತಬ್ಕೊಂಡ ಮೈನಾ!ನಿತ್ಯಾ ಮೆನನ್ ಬಿಚ್ಚಿಟ್ಟ ಸತ್ಯವೇನು?

Picture of Cinibuzz

Cinibuzz

Bureau Report


ಸಿನಿಮಾ ನಟಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅಭಿಮಾನಿಗಳು ತಲೆ ಕೆದರಿಕೊಂಡು ಹುಡುಕಾಟ ಶುರುವಿಟ್ಟುಕೊಳ್ಳುತ್ತಾರೆ. ಆ ಹುಡುಗಳ ಕುಲ, ಗೋತ್ರ, ಜನ್ಮ ಜಾಲಾಡೋ ವರೆಗೂ ಅವರಿಗೆ ನೆಮ್ಮದಿಯಿರುವುದಿಲ್ಲ. ಅಂಥಾದ್ದರಲ್ಲಿ ನಟಿಯೊಬ್ಬಳು ಫಾರಿನ್ ಹುಡುಗನನ್ನು ತಬ್ಬಿಕೊಂಡ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡರೆ ಗಂಡು ಅಭಿಮಾನಿಗಳ ಎದೆಯೊಡೆಯದಿರುತ್ತಾ?ಅಂಥದ್ದೇ ಒಂದು ಅನಿರೀಕ್ಷಿತ ಆಘಾತ ನಿತ್ಯಾ ಮೆನನ್ ಅಭಿಮಾನಿಗಳಿಗೂ ಎದುರಾಗಿದೆ. ಈಕೆ ಇನ್ಸ್ಟಾಗ್ರಾಮ್‌ನಲ್ಲಿ ವಿದೇಶಿ ಹುಡುಗನೊಬ್ಬನನ್ನು ತಬ್ಬಿಕೊಂಡ ಫೋಟೋ ಹಾಕಿಕೊಂಡಿದ್ದೇ ಈ ದುರಂತಕ್ಕೆ ಮೂಲ ಕಾರಣ!

ವಿದೇಶಿ ಹುಡುಗನೊಬ್ಬನನ್ನು ಬಿಗಿಯಾಗಿ ತಬ್ಬಿಕೊಂಡ ಫೋಟೋ ಹಾಕಿದ್ದ ನಿತ್ಯಾ ಅದಕ್ಕೆ ಫ್ರೆಂಡ್ಸ್, ಲವ್, ಆಂಡ್ ಹ್ಯಾಪಿನೆಸ್ ಅನ್ನೋ ಬರಹವನ್ನೂ ಸೇರಿಸಿದ್ದಳು. ಈ ಬಗ್ಗೆ ತಲೆ ಕೆಡಿಸಿಕೊಂಡ ಅಭಿಮಾನಿಗಳೆಲ್ಲ ಹೇಗಾದರೂ ಸತ್ಯ ತಿಳಿಯಬೇಕೆಂಬ ಕಾರಣದಿಂದಲೇ ಶುಭ ಕೋರುತ್ತಾ ವಿಶ್ ಮಾಡಲಾರಂಭಿಸಿದ್ದರು. ಈ ಫೋಟೋ ಬೇರೆಯದ್ದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಲಾರಂಭಿಸಿದ್ದೇ ಎಚ್ಚೆತ್ತುಕೊಂಡ ನಿತ್ಯಾ ಕಡೆಗೂ ಈ ಬಗ್ಗೆ ಸಮಜಾಯಿಶಿ ನೀಡಿದ್ದಾಳೆ.ಈ ಫೋಟೋ ನೋಡಿ ಸಂಬಂಧ ಕಲಿಸಿ, ಮದುವೆಯ ಮಟ್ಟಕ್ಕೂ ಮುಂದಾಲೋಚನೆ ಮಾಡಿ ಕೆಲ ಮಂದಿ ವಿಶ್ ಮಾಡಲು ಶುರುವಿಟ್ಟಾಗ ನಿತ್ಯಾ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾಳೆ. ಈ ಹುಡುಗ ನನ್ನ ಫ್ರೆಂಡ್ ಮತ್ತು ಸಹೋದರನಂಥವರು ಅಂತ ನಿತ್ಯಾ ಸ್ಪಷ್ಟೀಕರಣ ಕೊಟ್ಟ ಬಳಿಕ ಕೆಲ ಮಂದಿ ನಿರಾಳವಾಗಿದ್ದಾರೆ. ಇದಾದ ಬಳಿಕ ನಿತ್ಯಾ ಮತ್ತೋರ್ವ ವಿದೇಶಿ ಹುಡುಗಿಯ ಜೊತೆಯಿರೋ ಫೋಟೋವನ್ನೂ ಹಾಕಿಕೊಂಡಿದ್ದಾಳೆ.

ಅಷ್ಟಕ್ಕೂ ಇದು ಅಮ್ಮ ಆಶ್ರಮದಲ್ಲಿ ತೆಗೆಸಿಕೊಂಡಿರೋ ಫೋಟೋವಂತೆ. ಅಮ್ಮನ ಆಶ್ರಮದಲ್ಲಿ ತಬ್ಬಿಕೊಳ್ಳೋದೂ ಒಂದು ಸಂಪ್ರದಾಯವಾದ್ದರಿಂದ ನಿತ್ಯಾ ವಿದೇಶಿ ಹುಡುಗನನ್ನು ತಬ್ಬಿಕೊಂಡಿರಬಹುದೇನೋ… ಅಂತೂ ಖುದ್ದು ಆಕೆಯೇ ಸ್ಪಷ್ಟೀಕರಣ ಕೊಟ್ಟಿದ್ದರಿಂದ ಈ ಫೋಟೋ ಸುತ್ತಾ ರೂಮರುಗಳು ಹಬ್ಬಿಕೊಳ್ಳೋದಕ್ಕೆ ತಡೆ ಬಿದ್ದಿದೆ!

ಇನ್ನಷ್ಟು ಓದಿರಿ

Scroll to Top