ಏಕ್ ಲವ್ ಯಾ ಚಿತ್ರದಿಂದ ರಚಿತಾ ಔಟ್ ನ್ಯೂಸು ಶುದ್ಧ ಸುಳ್ಳು: ಜೋಗಿ ಪ್ರೇಮ್

Picture of Cinibuzz

Cinibuzz

Bureau Report

ಏಕ್ ಲವ್ ಯಾ ಚಿತ್ರದಲ್ಲಿ ರಚಿತಾರಾಮ್ ವಿಶೇಷ ಪಾತ್ರವೊಂದರಲ್ಲಿ ನಟಿಸಲಿದ್ದಾರೆಂದು ಚಂದನವನದಲ್ಲಿ ಸುದ್ದಿಯಾಗಿತ್ತು. ಅಲ್ಲದೇ ಫೇಸ್ ಬುಕ್ ನಲ್ಲಿ ನಿರ್ಮಾಪಕಿ ರಕ್ಷಿತಾ ಪ್ರೇಮ್ ರಚಿತಾ ರಾಮ್ ಅವರೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡು ಕನ್ ಫರ್ಮ್ ಕೂಡ ಮಾಡಿದ್ದರು.

ಹೀಗಿದ್ದಾಗ ಮತ್ತೆ ರಚಿತಾ ಮತ್ತು ರಕ್ಷಿತಾ ನಡುವೆ ಯಾವುದೋ ವಿಚಾರಕ್ಕೆ ಕಿರಿಕ್ಕಾಗಿ ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಗಾಳಿಸುದ್ದಿಯನ್ನು ಯಾರೋ ಕಿಡಿಗೇಡಿಗಳು ಹಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಕುರಿತು ಸಿನಿಬಜ್ ಗೆ‌ ಸ್ವತಃ ಜೋಗಿ ಪ್ರೇಮ್ ಅವರೇ ಪ್ರತಿಕ್ರಿಯಿಸಿ, ಅವೆಲ್ಲವೂ ಅಪ್ಪಟ ಸುಳ್ಳು. ಗಾಳಿ ಸುದ್ದಿ ಎದ್ದಿರುವಂತೆ ಯಾವುದೇ ಗಲಾಟೆಗಳು ಆಗಿಲ್ಲ. ಅಲ್ಲದೇ ರಚಿತಾ ಒಮ್ಮತದಿಂದಲೇ ಶೂಟಿಂಗ್ ಗೆ ಪಾಲ್ಗೊಳ್ಳಲಿದ್ದಾರೆ. ಎಂದು ಎದ್ದ ಗುಲ್ಲಿಗೆ ಬ್ರೇಕ್ ಹಾಕಿದ್ದಾರೆ. ಅಲ್ಲದೇ ಇಂತಹ ಬೇಡದ ವಿಚಾರಗಳಿಗೆ ಅಭಿಮಾನಿಗಳು ಕಿವಿ ಕೊಡಬಾರದೆಂದು ವಿನಂತಿಯನ್ನು ಮಾಡಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top