ಟಾಪಾಗೌಳೆ ಹಾಡೆಂದರೆ ದರ್ಶನ್‌ಗೆ ಶ್ಯಾನೆ ಇಷ್ಟವಂತೆ!
ಸೋಷಿಯಲ್ ಮೀಡಿಯಾದ ಮಹಿಮೆ ಎನ್ನುವಂತೆ ಇತ್ತೀಚಿಗೆ ಕ್ರಿಯಾಶೀಲ ಹಾಡುಗಳನ್ನು ಜನ ಹೆಚ್ಚೆಚ್ಚು ಇಷ್ಟ ಪಡುತ್ತಿದ್ದಾರೆ. ಈಗ ಅಂಥ ಹಾಡುಗಳ ಸಾಲಿಗೆ ವಿಜಯಕಿರಣ್ ನಿರ್ದೇಶನದ ಸಿಂಗ ಚಿತ್ರದ ಹಾಡೊಂದು ಹೊಸದಾಗಿ ಸೇರ್ಪಡೆಯಾಗಿದೆ. ಸಿಂಗ ಚಿತ್ರದಲ್ಲಿ ಬರುವ ಈ ವಾಟ್ ಎ ಬ್ಯೂಟಿಫುಲ್ ಎಂಬ ವೀಡಿಯೋ ಸಾಂಗನ್ನು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ನಂತರ ಸಿಂಗ ಚಿತ್ರದ ಹಾಡುಗಳ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ನಟ ದರ್ಶನ್ ಚಿತ್ರದಲ್ಲಿ ಬರುವ ಶಾನೆ ಟಾಪಾಗೌಳೆ ಎಂಬ ಹಾಡು ನನಗೆ ಬಹಳ ಇಷ್ಟವಾಗಿತ್ತು ಎಂದು ಹೇಳಿದರು.
ನಟ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಸಿಂಗ ಚಿತ್ರದ ಶಾನೆ ಟಾಪಾಗೌಳೆ ಎಂಬ ಹಾಡನ್ನು ಯೂ ಟ್ಯೂಬ್ ನಲ್ಲಿ ಬರೋಬ್ಬರಿ 7 ಮಿಲಿಯನ್ ಜನರು ನೋಡುವ ಮೂಲಕ ಈ ಹಾಡು ಹೊಸ ದಾಖಲೆಯನ್ನೇ ಬರೆದಿದೆ. ಈ ಹಾಡಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಕ್ಲೀನ್‌ಬೌಲ್ಡ್ ಆಗಿದ್ರಂತೆ.
ಇದೀಗ ಚಿತ್ರತಂಡ ಈ ಚಿತ್ರದ ಮತ್ತೊಂದು ಸುಂದರವಾದ ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರತಂಡ ಶುಕ್ರವಾರ ಏರ್ಪಡಿಸಿದ್ದ ಸಿಂಗ ಚಿತ್ರದ ಹಾಡುಗಳ ಸಕ್ಸಸ್ ಪ್ರೆಸ್‌ಮೀಟ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಾಟ್ ಎ ಬ್ಯೂಟಿಫುಲ್ ಹುಡುಗಿ ವಿಡಿಯೋ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಹಿಂದೆ ಚಿತ್ರದ ಟೀಸರನ್ನು ಕೂಡಾ ದರ್ಶನ್ ಅವರೇ ಬಿಡುಗಡೆ ಮಾಡಿದ್ದರು. ವಿಶೇಷ ಎಂದರೆ ನವೀನ್ ಸಜ್ಜು ಅವರ ಜೊತೆಗೆ ವಾಟ್ ಎ ಬ್ಯೂಟಿಫುಲ ಹಾಡನ್ನು ಚಿರಂಜೀವಿ ಪತ್ನಿ ಮೇಘನಾ ರಾಜ್ ಹಾಡಿದ್ದಾರೆ. ಸಿಂಗ ಒಂದು ಮಾಸ್ ಅಂಡ್ ಕಮರ್ಷಿಯಲ್ ಕಂಟೆಂಟ್ ಹೊಂದಿರೋ ಚಿತ್ರವಾಗಿದ್ದು ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉದಯ್ ಕೆ. ಮೆಹ್ತಾ ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಧರ್ಮವಿಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಚೇತನ್ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ತಾರಾ, ಶಿವರಾಜ್ ಕೆ.ಆರ. ಪೇಟೆ, ಮಡೆನೂರು ಮನು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದು ಜುಲೈ 19 ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ.











































