ಚಂದನಶೆಟ್ಟಿ ಈಗ ಶೋಕಿಲಾಲ!

Picture of Cinibuzz

Cinibuzz

Bureau Report

ದಿ ಪೆಗ್ ಖ್ಯಾತಿಯ ಚಂದನ್ ಶೆಟ್ಟಿ ಶೋಕಿಲಾಲ ಹೊಸ ಆಲ್ಬಂ ರಿಲೀಸ್ ಮಾಡಲಿದ್ದಾರೆ. ಇದು ಕೂಡ Rap ಸಾಂಗ್ ಆಗಿರಲಿದ್ದು, ಜತೆ ಜತೆಗೆ ಹಿಪ್ ಹಾಪ್, ಮೆಲೋಡಿ ಟ್ಯೂನ್ ಗಳಿವೆ. ಮಿಡಲ್ ಕ್ಲಾಸಿನ ಹುಡುಗನ ಜೀವನದಲ್ಲಿ ಶೋಕಿ ಅನ್ನೋದು ಎಷ್ಟುಮುಖ್ಯ? ಅನಗತ್ಯ ಶೋಕಿ ಮಾಡಲು ಹೋಗಿ ಆ ಹುಡುಗ ಪಡುವ ಪಾಡೇನು ಅನ್ನೋದೇ ಈ ಶೋಕಿಲಾಲ.

ಈಗಾಗಲೇ ಹಾಡಿನ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಬಹಳಷ್ಟು ನಿರೀಕ್ಷೆಯಲ್ಲಿರುವ ಚಂದನ್ ಶೆಟ್ಟಿ ಅಭಿಮಾನಿಗಳು ಶೋಕಿಲಾಲ ಮತ್ತೊಂದು ಟ್ರೆಂಡಿಂಗ್ ಟ್ಯೂನ್ ಆಗಲಿದೆ ಎಂಬ ಭರವಸೆಯನ್ನಿಟ್ಟುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top