ಕೃತಿ ಸನೇನ್ ಗೆ ನೆಟ್ಟಿಗರು ಕ್ಲಾಸ್!

Picture of Cinibuzz

Cinibuzz

Bureau Report

ಚಿರತೆಗಳೊಂದಿಗೆ ತೆಗೆಸಿಕೊಂಡು ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದ ನಟಿ ಕೃತಿ ನನೆಸ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಿನಿಮಾವೊಂದರ ಚಿತ್ರೀಕರಣಕ್ಕೆ ದಕ್ಷಿಣ ಆಫ್ರಿಕಾದ ಜಾಂಬಿಯಾಗೆ ತೆರಳಿದ್ದ ಕೃತಿ ಅಲ್ಲಿನ ರಾಷ್ಟ್ರೀಯ ಪಾರ್ಕ್‌ನಲ್ಲಿ ಚಿರತೆಗಳೊಂದಿಗೆ ತೆಗೆಸಿಕೊಂಡ ಹತ್ತಾರು ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದರು. ಚಿರತೆಯೊಂದಿಗೆ ವಾಕ್‌ ಮಾಡಿರುವ ಜೊತೆಗೆ ಅವುಗಳ ಹತ್ತಿರ ನಿಂತು ಪೋಸ್ ಕೂಡ ಕೊಟ್ಟಿದ್ದರು.

https://www.instagram.com/p/Bzigvb5gHfV/?utm_source=ig_web_copy_link

ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕೃತಿ ಸನೇನ್ ಗೆ ಕ್ಲಾಸ್ ತೆಗೆದುಕೊಂಡಿದ್ದು, ‘ಈ ರೀತಿಯ ಚಿತ್ರಗಳಿಗಾಗಿ ಚಿರತೆಗಳಿಗೆ ಡ್ರಗ್ಸ್‌ ಕೊಡಲಾಗುತ್ತದೆ. ಆದ್ದರಿಂದಲೇ ಅವು ಮನುಷ್ಯರಿಗೆ ತೊಂದರೆ ಕೊಡದೇ ಸುಮ್ಮನೆ ಚಿತ್ರ ತೆಗೆಯಲು ಬಿಡುತ್ತವೆ. ಪ್ರಾಣಿಗಳಿಗೆ ಹಿಂಸೆ ಕೊಟ್ಟು ಫೋಟೊ ತೆಗೆಸಿಕೊಳ್ಳುವ ಟ್ರೆಂಡ್‌ ಈಗ ಶುರುವಾಗಿದೆ ಇದನ್ನೆಲ್ಲಾ ಬಿಡಿ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ‘ಪ್ರಾಣಿ ಹಿಂಸೆಯಿಂದ ನಿಮಗೇನು ಖುಷಿ ಸಿಗುತ್ತದೆ. ಈ ರೀತಿಯ ಚಿತ್ರಗಳು ನಿಮಗೆ ಸಹಾಯ ಮಾಡುವುದಿಲ್ಲ’ ಎನ್ನುವ ಕಮೆಂಟ್ಸ್‌ಗಳು ಬರತೊಡಗಿದ ಬಳಿಕ ಅವರು ಕೆಲವು ಚಿತ್ರಗಳನ್ನು ಡಿಲೀಟ್ ಮಾಡಿದ್ದಾರೆ. ಇದಕ್ಕೆ ಕ್ಷಮೆ ಕೂಡ ಕೇಳಿರುವ ಕೃತಿ, ಡ್ರಗ್ಸ್‌ ಕೊಟ್ಟಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಕೃತಿ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top