ಜಿಷ್ಣು ಹೊಸ ಪೋಸ್ಟರ್ ರಿಲೀಸ್!

Picture of Cinibuzz

Cinibuzz

Bureau Report

ವಿಭಿನ್ನ ಟೈಟಲ್ಲಿಟ್ಟುಕೊಂಡು ಚಂದನವನಕ್ಕೆ ಹೊಸ ಹೊಸ ಮುಖಗಳ ಎಂಟ್ರಿ ಈಗೀಗ ಬಹಳಷ್ಟು ಜೋರಾಗಿಯೇ ಆಗುತ್ತಿದೆ. ವಿಭಿನ್ನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಥಿಯೇಟರ್ ನಲ್ಲಿ ಮಸ್ತ್ ಮಜಾ ಮಾಡುವಂತೆ ಮಾಡುವ, ತಿದ್ದಿ ಬುದ್ದಿ ಹೇಳುವ, ಭಯಭೀತರನ್ನಾಗಿಸುವ ಕಥಾಹಂದರದಲ್ಲಿಯೇ ಕನ್ನಡದ ಸಾಕಷ್ಟು ಸಿನಿಮಾಗಳು ಬರುತ್ತಲೇ ಇದೆ. ಅದರ ಸಾಲಿಗೆ ಇದೀಗ ಜಿಷ್ಣು ಎಂಬ ಹೊಸ ಸಿನಿಮಾ ಸೇರಲಿದೆ.

ಹೌದು.. ಗಣಿದೇವ್ ಎನ್ನುವ ಯುವ ಪ್ರತಿಭೆ ಚೊಚ್ಚಲ ಬಾರಿಗೆ ಜಿಷ್ಣು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಜತೆಗೆ ನಿರ್ದೇಶನದ ಜವಾಬ್ದಾರಿಯನ್ನು ಸ್ವತಃ ಅವರೇ ಹೊರಲಿದ್ದಾರೆ. ಟೈಟಲ್ ಗೆ ತಕ್ಕಂತಹ ಎಳೆಯನ್ನಿಟ್ಟುಕೊಂಡಿರುವ ಈ ಚಿತ್ರದಲ್ಲಿ ಗಣಿದೇವ್ ಐದು ವಿಭಿನ್ನ ಶೇಡ್ ಗಳಲ್ಲಿ ಮಿಂಚಲಿದ್ದಾರೆ. ಇನ್ನು ಗಣಿದೇವ್ ಗೆ ನಾಯಕಿಯರಾಗಿ ಸುಮಿತ್ರಾ ಗೌಡ, ಯಾಮಿನಿ ತಿವಾರಿ, ಹಾಗೂ ನಿಕಿತಾ ದೇವಾಡಿಗ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಜಿಷ್ಣು ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಮಿಕ್ಕಂತಹ ಸಾಕಷ್ಟು ವಿಚಾರಗಳನ್ನು ಸದ್ಯದಲ್ಲಿಯೇ ಚಿತ್ರತಂಡ ತಿಳಿಸಲಿದೆಯಂತೆ. ಜಿಷ್ಣು ಪಂಚಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಸವ್ಯಸಾಚಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿದೆ.

ಇನ್ನಷ್ಟು ಓದಿರಿ

Scroll to Top